Google

ICHARO

YEDDE PATHERA
Naramaniyagh ovven Kalpane malppere sadiyoundo.. Aven Padeyarala Sadhya undu.

ಪಗ್ಗು 18 ಸಿರಿ ದಿನಾಚರಣೆ ಬಲೇ ಸಿರಿ ಭೂಮಿ ಬುಲೇಪಾಗ ತುಳುನಾಡಿನ ಬನ(ವನ) ಸಂಸ್ಕೃತಿಯು ಅದು ಜಗತ್ತಿಗೆ ಮಾದರಿ. : ಉದಯ ಕುಮಾರ್ ಶೆಟ್ಟಿ





ಮಂಗಳೂರು : ತುಳುನಾಡಿನ ಬನ ಸಂಸ್ಕೃತಿಯು ಅದು ಜಗತ್ತಿಗೆ ಮಾದರಿ ಆದುದರಿಂದಲೇ ಇವತ್ತಿಗೂ ತುಳುನಾಡಿನ ಸಂಸ್ಕೃತಿಯಲ್ಲಿ ಬನಗಳು ಅಚ್ಚಳಿಯದೆ ಉಳಿದಿದೆ. ಆದರೆ ಧಾರ್ಮಿಕತೆಯ ಹೆಸರಿನಲ್ಲಿ ಇದ್ದ ಬನಗಳನ್ನು ಕಡಿದು ಕಾಂಕ್ರೀಟ್ ಸ್ಮಾರಕಗಳಾಗಿ ಮಾಡುವುದು ಖೇದಕರ. ಕೇಪುಳ ಹೂವನ್ನು ನಿರಂತರವಾಗಿ ದೇವರಿಗೆ ಅರ್ಪಿಸುವುದರಿಂದ ಮತ್ತು ಅದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲಿ ಅದ್ಭುತವಾದಂತಹ ತಪೂಶಕ್ತಿಯು ಉಂಟಾಗುತ್ತದೆ. ಇಂತಹ ಹಲವು ಗಿಡಮೂಲಿಕೆಗಳನ್ನು ಕಡೆಗಣಿಸಿ ಆಡಂಬರದ ಹೆಸರಿನಲ್ಲಿ ಏನೇನೋ ವಸ್ತುಗಳನ್ನು ದೇವರಿಗೆ ಅರ್ಪಿಸುತ್ತಿದ್ದೇವೆ. ಬನ ವೆಂದರೆ ವನ ಎಂದರ್ಥ ಇಂತಹ ವನ ಸಂಸ್ಕೃತಿಯನ್ನು ಬೆಳೆಸಲು ಸಮಾಜ ಮುಂದಾಗಬೇಕಾಗಿದೆ ಎಂದು ಪಿಲಿಕುಳ ನಿಸರ್ಗಧಾಮ ಸಸ್ಯಕಾಶಿಯ ಮೇಲ್ವಿಚಾರಕರಾದ ಉದಯ ಕುಮಾರ್ ಶೆಟ್ಟಿ ಅವರು ಹೇಳಿದರು.
ಅವರು ನಗರದ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ನಡೆದ ಪಗ್ಗು 18 ಸಿರಿ ದಿನಾಚರಣೆ ಮತ್ತು ಬಲೆ ಸಿರಿಭೂಮಿ ಬುಳೆಪಾಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟರ ಯಾನೆ ನಾಡವರ ಸಂಘ ಮಹಿಳಾ ವಿಭಾಗ ಮತ್ತು ತುಳುವರ್ಲ್ಡ್ (ರಿ) ಕುಡ್ಲ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ವಹಿಸಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಂಜುಳಾ ಶೆಟ್ಟಿ ಅವರು ಮಾತನಾಡಿ ಪ್ರಕೃತಿ ಮತ್ತು ಸಂಸ್ಕೃತಿ ಪರಸ್ಪರ ಪೂರಕವಾಗಿರಬೇಕು ಸಂಸ್ಕೃತಿ ಹೆಸರಲ್ಲಿ ವಿಕೃತಿಯನ್ನು ಸೃಷ್ಟಿಸಿದರೆ ಮುಂದೊಂದು ದಿನ ಮೃತ್ಯು ಖಂಡಿತ ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕವಾಗಿ ಡಾ. ಆಶಾಜ್ಯೋತಿ ರೈ ಅವರು ಮಾತನಾಡಿ ಸಿರಿ ನಮ್ಮ ಸಂಸ್ಕೃತಿಯ ಪ್ರತೀಕ, ಸಿರಿ ಅಂದರೆ ಅದು ಪ್ರಕೃತಿ ಎಂದರ್ಥ ಆದುದರಿಂದ ಪ್ರಕೃತಿ ಮತ್ತು ಸಂಸ್ಕೃತಿ ಒಂದಾಗುವ ದಿವಸವನ್ನು ಪಗ್ಗು 18 ಸಿರಿ ದಿನಾಚರಣೆಯೆಂದು ಆಚರಿಸುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಹಣ ಸಂಪತ್ತನ್ನು ಬಿಟ್ಟು ಹೋಗದೆ ಹಿರಿಯರು ಕೊಟ್ಟ ಪ್ರಕೃತಿಯನ್ನು ಮರಳಿ ಕೊಡುವುದು ನಮ್ಮೆಲ್ಲರ ದ್ಯೆಯೋದ್ದೇಶ ಆಗಬೇಕು. ಆದುದರಿಂದ ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಈ ಯೋಜನೆಯನ್ನು ಎಲ್ಲೆಲ್ಲಿ ಖಾಲಿ ಭೂಮಿ ಬನ ದೇವಸ್ಥಾನ ಶಾಲೆ ವಠಾರಗಳು ಹಾಗೂ ತಮ್ಮ ಮನೆ ಪರಿಸರಗಳಲ್ಲಿ ಆದಷ್ಟು ಸಸಿಗಳನ್ನು ನೆಡುವ ಮತ್ತು ನಿರಂತರವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಪ್ರತಿಜ್ಞೆಯನ್ನು ಸ್ವೀಕರಿಸಬೇಕು ಎಂದು ಎಲ್ಲರಿಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಂಗಳೂರು ವಿಭಾಗದ ವಿವಿಧ ಮಹಿಳಾ ಘಟಕಗಳು ಬಲೇ ಸಿರಿ ಭೂಮಿ ಬುಲೇಪಾಗ
ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತ ಗೊಳಿಸುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಕ ಮಾಧವ ಉಳ್ಳಾಲ್ ಅವರು ರಾಮಕೃಷ್ಣ ವಿದ್ಯಾರ್ಥಿನಿ ಭವನದ ಸುತ್ತಮುತ್ತ ಹಲವಾರು ಮರಗಿಡಗಳನ್ನು ನೀಡುವಲ್ಲಿ ಮುತುವರ್ಜಿ ವಹಿಸಿದರು. ರಾಮಕೃಷ್ಣ ವಿದ್ಯಾರ್ಥಿ ನಿಲಯದ ಉಷಾ ಬಳ್ಳಾಲ್, ತುಳುವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
Share on :

SUDDI

 

Copyright © 2011 Tulu World - All Rights Reserved