Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ತೆನಸೇ ಮರ್ದ್- ಗಾಂಧಾರಿ ಮುನ್ಚಿ

ಕಾಡ್‌ರ್ದ್ ಬತ್ತಲ್ 101 ಆರೋಗ್ಯದ ಅಪ್ಪೆ ಗಾಂಧಾರಿ!

ಇತ್ತೆ ಗಾಂಧಾರಿ ಮುನ್ಚಿ/ಜೀರಿಗೆ ಮೆಣಸಿನಕಾಯಿ/ಕಾಡು  ಮೆಣಸಿನಕಾಯಿಗ್ ಭಾರೀ ಬೇಡಿಕೆ ಉಂಡು. ಕಾಡು, ತೋಟೊಲೆಡ್ ಒವ್ವೇ ಆರೈಕೆ ಇಜ್ಜಂದೆ ತನ್ನಾತೆಗೆ ಬುಳೆವೊಂದಿತ್ತಿನ ಈ ಮುನ್ಚಿದ ದೈಕ್ ಇತ್ತೆ ಮಾತೆರೆನಲಾ ದಿಟ್ಟಿ ಬೂರೊಂದುಂಡು.

ಊರುಡು ಅಡಿಗೆ ಮಲ್ಪೆರೆ ಸಾಧಾರಣವಾದ್ ಗಳಸೊಂದಿತ್ತಿನ ಈ ಮುಂಚಿ ದುಂಬು ಏರೆಗ್ಲಾ ಮಾರೊಂದು ಇಜ್ಜಾಂಡ್. ಆಂಡ ಇನಿ, ಜನಕುಲು ಅಯಿತ ಎಡ್ಡೆ ರುಚಿ ಬೊಕ್ಕ ಅದ್ಭುತ ಆರೋಗ್ಯ ಪ್ರಯೋಜನೊಲೆನ್ ತೆರಿಯೊನೊಂದುಲ್ಲೆರ್, ಬೊಕ್ಕ ಮಾರ್ಕೆಟ್ ಡ್ ಅಯಿತ ಮೌಲ್ಯಲಾ ಏರ್ದ್ಂಡ್.

ಇತ್ತೆದ ಕಾಲೊಡು, 100 ಗ್ರಾಂ ಗಾಂಧಾರಿ ಮುನ್ಚಿದ ಬೆಲೆ ₹650–₹700 ನಡುಟು ಉಂಡು ಬೊಕ್ಕ ಗ್ರಾಹಕೆರೆನ ನಡುಟು ಮಸ್ತ್ ಬೇಡಿಕೆ ಉಂಡು.

ಗಾಂಧಾರಿ ಮುನ್ಚಿ – ಪರಂಪರೆದ ರುಚಿ, ಆರೋಗ್ಯದ ಪರಿಮಳ! ಗಾಂತ+ಯೆರಿ 

ಈ  ಮುನ್ಚಿಗು ನೈಸರ್ಗಿಕ ಜೀರಿಗೆದ ರುಚಿ, ಮೃದುವಾಯಿನ ಚೋಲಿ, ಬೊಕ್ಕ ಎರಿಯುನ ಸ್ವಭಾವ ಉಂಡು. ಸಾಮಾನ್ಯ ಮುನ್ಚಿಲೆಡ್ದ್ ಸಂಪೂರ್ಣ ಬೇತೆ ರುಚಿನ್ ಕೊರ್ಪುಂಡು. ಗಾಂಧಾರಿ ಮುನ್ಚಿಡ್ ಮಲ್ತಿನ ಸಾರ್, ಸಾಂಬಾರ್, ಪುಳಿ ಸಾರ್, ಉಪ್ಪುಮುಂಚಿ,ಅತ್ತ್ಂಡ ಚಟ್ನಿನ್ ತಿನ್ಪುನವು ನಮ್ಮ ಅಪ್ಪೆ  ನಂಕ್ಕಾದ್ ಅಡುಗೆ ಮಲ್ತಿನ ಪೊರ್ತುದ ನೆಂಪು ಪುಟ್ಟವುಂಡು ಬೊಕ್ಕ ತಿಂದಿನ ತೃಪ್ತಿದ ಭಾವನೆನ್ ಕೊರ್ಪುಂಡು.

ತಿಂದಿನಕುಲು ಖಂಡಿತಾ ಕೇನುವೆರ್ – "ಉಂದು ಎಂಚಿನ ಮುಂಚಿ? ರುಚಿ ಮಸ್ತ್ ಎಡ್ಡೆ ಉಂಡು!"

ಗಾಂಧಾರಿ ಮುಂಚಿದ ಮರ್ದ್ ದ ಗುಣ: 

✅ ಜೀರ್ಣಕ್ರಿಯೆಗ್ ಭಾರಿ ಎಡ್ಡೆ.

✅ ಕೂಲಿ ಗಟ್ಟಿ ಮಲ್ಪುನು: ಕೂಲಿ ಬೇನೆಗ್ ಇಲ್ಲದ ಮರ್ದ್ ಆದ್ ಬಳಕೆ ಮಲ್ಪುವೆರ್.

✅ ಸಂಧಿವಾತ ಬೊಕ್ಕ ನರದೋಷ ನಿವಾರಣೆ ಮಲ್ಪುಂಡು.

✅ ರಕ್ತದೊತ್ತಡ ನಿಯಂತ್ರಣ ಮಲ್ಪೆರೆ ಸಹಾಯ ಮಲ್ಪುಂಡು.

✅ ಆಂಟಿಬಯೋಟಿಕ್- ಶರೀರೊಗು ಬರ್ಪುನ ರೋಗಾಣು  ಸೂಕ್ಷ್ಮ ಜೀವಿಲೆನ್ ಎದುರಿಸಾವುಂಡು.

✅ ಕೈ ಕಾರ್ ದರ್ಪು, ಪೊಕುಲ ಬರ್ಪಿನಯಿಕ್ ಇಲ್ಲ ಮರ್ದ್.

✅ ಹೃದಯದ ಆರೋಗ್ಯಗ್ ಎಡ್ಡೆ.

✅ ಬೊಜ್ಜು ನಿಯಂತ್ರಣ – ತೂಕ ಕಮ್ಮಿ ಮಲ್ಪೆರೆ ಸಹಾಯ ಮಲ್ಪುಂಡು.

✅ ಸಕ್ಕರೆ ಕಾಯಿಲೆ ನಿಯಂತ್ರಣೊಗು ಸಹಾಯ ಮಲ್ಪುಂಡು.

ಉಂದು ಖಾಲಿ ದೈ ಅತ್ತ್, ಉಂದು ತುಳುನಾಡ್‌ದ ಪ್ರಾಕೃತಿಕ ಸಂಪೊತ್ತು.

ಉಂದು ನಿಕ್ಲೆನ ಅಡುಗೆಗ್ ತಾತ್ಕಾಲಿಕ ರುಚಿನ್ ಮಾತ್ರ ಅತ್ತ್, ಶಾಶ್ವತ ಆರೋಗ್ಯೊನುಲಾ ಕೊರ್ಪುಂಡು.


Read Post | comments

ತೆನಸೇ ಮರ್ದ್ - ಕುಡುಅರಿ ( ಹುರುಳಿ )

ಕುಡು ತುಳುವೆರೆನ ರಡ್ದನೇ ಅರಿ ಅಂಚಾದೇ  ಕುಡುನು ಕುಡುಅರಿ ಪಂಡ್‌ದ್ ಲೆಪ್ಪುವೆರ್. ಅರಿ ಪಂಡ ಜೀವಸತ್ವ ಇತ್ತಿನವು, ಅವು ಇಜ್ಯಾಂದೆ ಬದ್ಕೆರೆ ಬಲ್ಲಿ ಪಂಡ್ದ್ ಅರ್ಥ.

ದಿನಲಾ ನಿಯಮಿತವಾದ್ ಕುಡುನ್ ತಿನ್ಪುನ  ಅಂಚನೆ ಬಳಕೆ ಮಲ್ಪುನಗ ಮಸ್ತ್ ಲಾಬೊಲು ಉಂಡು. ಆಯುರ್ವೇದೊಡುಲಾ ಉಂದು ಉಲ್ಲೇಖ ಉಂಡು, ಬೊಕ್ಕ ಉಂದೆನ್ ಸೇವನೆ ಮಲ್ಪುನಗ ಬೇತೆ ಬೇತೆ ಸೀಕ್ ಲೆನ್ ತಡೆಯೆರೆ ಸಾಧ್ಯೊ ಆಪುಂಡು. 

ನಮ ನಮ್ಮ ತಿನಸ್ - ಆಹಾರೊಡು ಮಸ್ತ್ ಬಗೆತ ಧಾನ್ಯೊಲೆನ್ ಸೇವನೆ ಮಲ್ಪುನವು ಸಹಜ. ಉಂದೆಟ್ ಉಪ್ಪುನ ಪೋಷಕಾಂಶೊಲು ಶರೀರೊಗು ಬಾರಿ ಎಡ್ಡೆ ಮಾತ್ರ ಅತ್ತಂದೆ ಸೀಕ್‌ರ್ದ್‌ಲಾ ರಕ್ಷಣೆ ಕೊರ್ಪುಂಡು. ಕೆಲವು ನಿರ್ದಿಷ್ಟವಾಯಿನ ಧಾನ್ಯೊಲೆನ್  ಪವಾಡದ ತಿನಸ್ ಪಂಡ್ದ್ ಲೆಪ್ಪುವೆರ್. ಅಂಚಿನ ಒಂಜಿ ಧಾನ್ಯ ಪಂಡ ಕುಡು. ಅಂಚಾದೇ ದುಂಬುದ ಕಾಲೋಡು ದೈವ ದೇಬೆರೆ ಸಾನೊಲೆಡ್ ಕುಡುನು ಪ್ರಸಾದವಾದ್ ಕೊರೊಂದಿತ್ತೆರ್. 

ಆಯುರ್ವೇದದ ಪ್ರಕಾರ ಕುಡುಟು ಕನೆರ್ ರಸ ಉಪ್ಪುಂಡು, ಉಂದೆನ್ ತಿಂದಿ ಬುಕ್ಕೊ ಪುಳಿ ರುಚಿ ಬರ್ಪುಂಡು. ಉಂದು ಶರೀರೊಡು ಉಷ್ಣೊನು ಸೃಷ್ಟಿ ಮಲ್ಪುಂಡು. ಕಫ ಬೊಕ್ಕ ವಾತನ್ ಕಮ್ಮಿ ಮಲ್ಪುಂಡು ಬೊಕ್ಕ ಪಿತ್ತ ಬೊಕ್ಕ ನೆತ್ತರ್ ವರ್ಧನೆ ಮಲ್ಪುಂಡು. ಕುಡುಟು ಪ್ರೋಟೀನ್ ಬೊಕ್ಕ ಪೋಷಕಾಂಶೊಲು ಎಚ್ಚ ಉಪ್ಪುಂಡು, ಬೊಕ್ಕ ಬೆಂದ್ ದ್  ಬಚ್ಚಿದ್ ಉಪ್ಪುನಕುಲು ಉಂದೆನ್ ಸೇವನೆ ಮಲ್ತ್ಂಡ ಬಚ್ಚೆಲ್ ಕಮ್ಮಿ ಆಪುಂಡು.

  • ಉಂದೆನ್ ಆಯುರ್ವೇದೊಡು ಅಸ್ಮರಿ ಛೇದಕ ಪನ್ಪೆರ್. ಮೂತ್ರಪಿಂಡದ ಕಲ್ಲುಲೆನ್ ರಟ್ಟಾವುಂಡು.
  • ಕುಡುಅರಿ ಸೇವನೆ ಮಲ್ತುಂಡ ಶರೀರ ಗಟ್ಟಿ ಆಪುಂಡು.
  • ವಾತನ್ ಒಂಜೇ ದಿಕ್ಕ್ ಗ್ ಕನಪುಂಡು, ಉಂದೆಡ್ದ್ ಮಲಬದ್ಧತೆ ಕಮ್ಮಿ ಆಪುಂಡು.
  • ಉಂದು ಗಂಟು ಮುಟ್ಟುಲೆನ್ ಗಟ್ಟಿ ಮಲ್ಪುಂಡು.
  • ಉಂದು ಕಣ್ಣ್ ದೃಷ್ಟಿಗ್ಲಾ ಎಡ್ಡೆ. ದೂರದೃಷ್ಟಿ ಬೊಕ್ಕ ಸಮೀಪದೃಷ್ಟಿನ್ ಸರಿ ಮಲ್ಪೊಂಡು. ಉಂದೆತ ಒಟ್ಟುಗು, ಸೊಪ್ಪು ತರಕಾರಿ ಬೊಕ್ಕ ವಿಟಮಿನ್ ಎ ಡ್ ಸಮೃದ್ಧವಾದ್ ಉಪ್ಪುನ ಆಹಾರೊಲೆನ್ ಸೇವನೆ ಮಲ್ತ್ಂಡ ಜೀರ್ಣಾಂಗ ವ್ಯವಸ್ಥೆ ಸುಧಾರಣೆ ಆಪುಂಡು.
  • ನೆತ್ತೆರ್ ಡ್ ಸಕ್ಕರೆದ ಮಟ್ಟೊನು ಕಮ್ಮಿ ಮಲ್ಪುಂಡು.
  • ಬೊಕ್ಕ  ಇನ್ಸುಲಿನ್ ಪ್ರತಿರೋಧೊನು ಕಮ್ಮಿ ಮಲ್ಪುಂಡು. ಉಂದು  ನೆತ್ತೆರ್ದ ಚೀಪೆದ ಮಟ್ಟೊನು ನಿಯಂತ್ರಣ ಮಲ್ಪೆರೆ ಸಹಾಯ ಮಲ್ಪುಂಡು.
  • ಕೊಲೆಸ್ಟ್ರಾಲ್ ಮಟ್ಟೊನು ಕಮ್ಮಿ ಮಲ್ಪೆರೆ ಸಹಾಯ ಮಲ್ಪುಂಡು ದಾರಾಳ ಫೈಬರ್ ಉಪ್ಪುಂಡು, ಉಂದು ನೆತ್ತೆರ್ದ ಬೊರ್ಚಾಂದಿ ಕೊಲೆಸ್ಟ್ರಾಲ್ ನ್ ನಿಯಂತ್ರಣ ಮಲ್ಪೆರೆ ಸಹಾಯ ಮಲ್ಪುಂಡು. ಉಂದು ಹೃದಯದ ನಾಳೊಲೆಡ್  ಉಪ್ಪುನ ಬೊರ್ಚಾಂದಿ ಕೊಲೆಸ್ಟ್ರಾಲ್ ನ್ ದೂರ ಮಲ್ಪುಂಡು ಬೊಕ್ಕ ಅಡಚಣೆದ ಅಪಾಯೊನು ಕಮ್ಮಿ ಮಲ್ಪುಂಡು. ಕುಡುಅರಿನ್ ನೆನೆತ್ ದೀದ್ ಮುಂಗೆ ಬರ್ಪಾದ್ ತಿಂದ್ಂಡ ಬುಕ್ಕಲ ಎಡ್ಡೆ.


Read Post | comments

ತುಳುವೇಶ್ವರ ತುಳುನಾಡಿನ ವೈಭವ

ತುಳುವೇಶ್ವರ ತುಳುನಾಡಿನ ವೈಭವ
ಬಸ್ರೂರು ತುಳುವೇಶ್ವರದಲ್ಲಿ ನಡೆದ ತಾಂಬೂಲ ಪ್ರಶ್ನೆ ಚಿಂತನೆ  ಪ್ರಕಾರ ಅಖಂಡ ತುಳುನಾಡಿನ ಜನಪದ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಒಳಗೊಂಡ ಹಾಗೂ ತುಳುನಾಡಿನ ಪೂರ್ವ ಪರಂಪರೆಯನ್ನು ವೈಭವೀಕರಿಸಿದ ಸಾನಿಧ್ಯವಾಗಿದೆ ತುಳುವೇಶ್ವರ. ಈಗ ಹುಟ್ಟಿದ ಅದೇ ರೀತಿ ಮುಂದೆ ಹುಟ್ಟುವ ಮಕ್ಕಳಿಗೂ ಜಾತಿ ಮತ ಭಾಷೆ ಭೇದವಿಲ್ಲದೆ ಈ ದೇವರ ಆರಾಧನೆ ಜೀವನ ಸಾರ್ಥಕತೆಗೆ ಮತ್ತು ಯಶಸ್ವಿಗೆ ಅತಿ ಅಗತ್ಯ.

 ಸಂಪೂರ್ಣ ಏಕೀಕೃತ  ತುಳುನಾಡನ್ನೇ ವ್ಯಾಪಿಸಿದ್ದ ಈ ತುಳುವೇಶ್ವರ ಹಾಗೂ ತೌಲವೇಶ್ವರಿ ಮತ್ತು ಪಂಜುರ್ಲಿ ದೈವ ಅಂತೆಯೇ ಪರಿವಾರ ದೈವ ದೇವರುಗಳ ಆರಾಧನೆ ಹಲವಾರು ಶತಮಾನಗಳಿಂದ ದಿಕ್ಕು ತಪ್ಪಿದೆ. ಆದರೂ ತುಳುನಾಡಿನ ಪ್ರತಿ ಮನೆಗಳಲ್ಲೂ  ವಿವಿಧ ರೂಪಗಳ ಆರಾಧನೆಯಿಂದ ಈ ದೈವ ದೇವರುಗಳ ಕೃಪೆ ನಿರಂತರ ಇದೆ. ಈ ಆರಾಧನಾ ಸಂಸ್ಕೃತಿಯನ್ನು  ಪುನಃ ಸ್ಥಾಪನೆ ಮಾಡಿದರೆ ತುಳುನಾಡಿಗೆ ಅಲ್ಲದೆ ತುಳುನಾಡಿನ ಪ್ರತಿಯೊಬ್ಬರಿಗೂ ಶ್ರೇಯಸ್ಕರ ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿದೆ. 

ಈ ಬಗ್ಗೆ ತುಳುನಾಡಿನ ಪ್ರತಿಯೊಬ್ಬರೂ ಕೂಡ ಈ ದೇವಸ್ಥಾನದ ಮರುವೈಭವಕ್ಕೆ ಸಾಕ್ಷಿ ಆಗಬೇಕು. ಓರ್ವ ವ್ಯಕ್ತಿಯೇ ಈ ಕ್ಷೇತ್ರ ಜೀರ್ಣೋದ್ಧಾರ ಮಾಡಲು ಮುಂದೆ ಬರುತ್ತಾರೆ. ಆದರೆ ತುಳುನಾಡಿನ ಪ್ರತಿಯೊಬ್ಬರ ಕೊಡುಗೆಯನ್ನು ದೇವರು ಬಯಸುತ್ತಾರೆ. ಅದಕ್ಕಾಗಿ ಮುಂದೆ ಅಷ್ಟಮಂಗಳ ಪ್ರಶ್ನೆ ಚಿಂತಿಸುವ ಮೊದಲು ತುಳುನಾಡಿನ ಪ್ರತಿಯೊಬ್ಬರಿಗೂ ಈ ಮಾಹಿತಿ ತಲುಪಬೇಕು ಹಾಗೂ ಪ್ರತಿಯೊಬ್ಬರು ಈ ಕಾರ್ಯದಲ್ಲಿ ಬಂದು ಸೇರಿ ಕೈಜೋಡಿಸಬೇಕು ಹಾಗೂ ಶಾಶ್ವತ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸಬೇಕು ಎಂದು ಪ್ರಶ್ನೆ ಚಿಂತನೆಯಲ್ಲಿ ತಿಳಿದು ಬಂದಿದೆ. 

ಈ ಬಗ್ಗೆ ಕಾರ್ಯಾಚರಿಸಲು ತುಳುವರ್ಲ್ಡ್ ಫೌಂಡೇಶನಿನ ಮತ್ತು ಎಲ್ಲಾ ತುಳುಕೂಟಗಳ ಹಾಗೂ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ತುಳುನಾಡಿನ ಪ್ರತಿ ಗ್ರಾಮಗಳಲ್ಲೂ ಹಾಗೂ ಎಲ್ಲೆಲ್ಲಿ ತುಳುವರಿದ್ದಾರೊ ಅಲ್ಲಿ ತುಳುವ ಮಹಾಸಭೆ ರಚಿಸಿ ಕಾರ್ಯ ಪ್ರವೃತ್ತರಾಗಲು  ಅನುಮತಿ ಪ್ರಶ್ನೆ ಚಿಂತನೆಯಲ್ಲಿ ಲಭಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಬಗ್ಗೆ ಜಾಗೃತಿಯನ್ನು ಮೂಡಿಸಿ ಈ ಮಹತ್ಕಾರ್ಯವನ್ನು ಯಶಸ್ವಿಗೊಳಿಸಬೇಕು ಹಾಗೂ ನಮ್ಮ ನಮ್ಮ ಊರಿನಲ್ಲಿ ಈ ಬಗ್ಗೆ ಸಮಿತಿ ರಚಿಸಲು ಮುತುವರ್ಜಿ ವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ

Read Post | comments

ಕುಂಬಳೆ ಮೂರು ಸಾವಿರ ಸೀಮೆಯ ಪಟ್ಟದ ದೈವ ಬೀರ್ನಾಳ್ವ

ಕುಂಬಳೆ ಮೂರು ಸಾವಿರ  ಸೀಮೆಯ ಪಟ್ಟದ ದೈವ ಬೀರ್ನಾಳ್ವ
(ಬೋಳ, ಮುಕ್ಕೂರು, ಕುಂಡಾಪು, ಕೋಟೆಂಜ,ವಳಮಲೆ/ಕಡಾರ್, ಕಳೇರಿ, ಪುಂಗೊಡಿ ಮಾಡದಲ್ಲಿ ನೆಲೆಯಾದ ಸತ್ಯ  ಬೀರ್ನಾಳ್ವ) (ಬರಹ : ರೋಹಿತ್ ಬಿರ್ವ ಪಡುಮಲೆ)

ಸತ್ಯದ ಸೀಮೆ ಎಂದೇ ಕೊಂಡಾಡಲ್ಪಟ್ಟ ಕುಂಬಳೆ ಮೂರು ಸಾವಿರ ಸೀಮೆಯಲ್ಲಿ ಅಡೂರು, ಮಧೂರು, ಕಾವು, ಕನ್ಯಾರ (ಕಣಿಪುರ) ಎಂಬ ನಾಲ್ಕು ಸ್ಥಾನಗಳು ನಾಲ್ವರು ದೇವರಿಗೆ. ಪಡುಮಲೆ, ಪೈಕ, ಬೆದ್ರಡ್ಕ,ಪುತ್ತಿಗೆ ಎಂಬ ನಾಲ್ಕು ಸ್ಥಾನಗಳು ಇರ್ವರು ಅರಸು ಉಳ್ಳಾಕುಲು ದೈವಗಳಿಗೆ (ಆದಿ ಪರ್ಮಲೆ - ಅಂತ್ಯ ಪುತ್ಯೆ) ಆದಿ ಪುತ್ತೂರು ಕೊಟ್ಯ, ಪಂಜದ ಗುಡ್ಡೆ,ಕೋಟೆಕ್ಕಾರ್, ನಂದ್ರಾಡಿ ಬಾರಿಕೆ ಎಂಬ ನಾಲ್ಕು ಸ್ಥಾನಗಳು ಮೂರುಸಾವಿರ ಸೀಮೆಯ ರಾಜನ್ ದೈವ ಜುಮಾದಿಗೆ.

ಇಂತಹ ಕಾಲದಲ್ಲಿ ಕೈಲಾಸದ ಅಧಿಪತಿಯಾದ ಪರಮೇಶ್ವರನಿಗೆ ಒಂದು ಅಪೇಕ್ಷೆ ಉಂಟಾಗುತ್ತದೆ. ಅದೇನೆಂದರೆ ಸತ್ಯದ ಸೀಮೆಯಲ್ಲಿ ಈ ರೀತಿಯಲ್ಲಿ ದೈವ - ದೇವರು ವೈಭವದಲ್ಲಿ ಮೆರೆಯುವಾಗ ಆ ಸೀಮೆಗೆ ಓರ್ವ ಪಟ್ಟದ ದೈವ ಇರಬೇಕು ಎಂದು ಮನದಲ್ಲಿ ಯೋಚಿಸಿದ ಸಂದರ್ಭ ಕೈಲಾಸದಲ್ಲಿ ಶಿವಪಾರ್ವತಿಯರು ನರೇಶ್ವರನಾಗಿ (ಅರ್ಧನಾರೀಶ್ವರನಾಗಿ) ಸತ್ಯದ ಸೀಮೆಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಬೇಕೆಂದು ಸನ್ನದ್ಧರಾಗುತ್ತಾರೆ.
       
ಅದೇ ವೇಳೆಗೆ ಕುಂಬ್ಳೆ ಸೀಮೆಯ ವ್ಯಾಪ್ತಿಯಲ್ಲಿ ಮಾಯಿಪ್ಪಾಡಿ ಅರಮನೆಗೆ ಸಮೀಪದ "ಬೋಳ" ಎಂಬ ಹೆಸರಿನ ಒಂದು ಊರಿನಲ್ಲಿ ಬೀರಣ್ಣ ಎಂಬ ಹೆಸರಿನ ಬಂಟ ಸಮುದಾಯದ ಓರ್ವ ಹುಡುಗ ಇರುತ್ತಾನೆ. ಆತನ ದಿನಚರಿಯಲ್ಲಿ ದನವನ್ನು ಮೇಯಿಸುವ ಕಾರ್ಯವೂ ಒಂದು. ಹೀಗೆ ದನ ಮೇಯಿಸುತ್ತ ಬೋಳದ ಬಯಲಿನಲ್ಲಿ ಬೀರಣ್ಣ ಇರುವ ಸಂದರ್ಭದಲ್ಲಿ ಮೇಲೆ ಮೇಘ ಲೋಕದಲ್ಲಿ ಪ್ರಭು ಈಶ್ವರ, ಪಾರ್ವತಿಯರ ಸಂಕಲ್ಪದಲ್ಲಿ ಒಮ್ಮಿಂದೊಮ್ಮೆಗೆ ಗುಡುಗು, ಸಿಡಿಲು, ಮಿಂಚುಗಳ ಝೆಂಕಾರ ಆ ಸಮಯದಲ್ಲಿ ನರೇಶ್ವರನು ಒಂದು ಕಬ್ಬಿಣದ ತುಂಡಿನ ರೂಪಹೊಂದಿ ಆಕಾಶ ಮಾರ್ಗದಿಂದ ಭೂಮಿಗೆ ಸಿಡಿಲಿನೊಂದಿಗೆ ಬೋಳದ ಬಯಲಿನಲ್ಲಿರುವ ಹಳ್ಳವೊಂದಕ್ಕೆ ಬೀಳುತ್ತಾನೆ. ಆ ಕಬ್ಬಿಣದ ತುಂಡು ಹಳ್ಳದಲ್ಲಿ ತೇಲುತ್ತಾ, ಸುತ್ತುತ್ತಾ ಹಳ್ಳದ ದಡಕ್ಕೆ ಬರುತ್ತದೆ. ಆ ಸಂದರ್ಭದಲ್ಲಿ ಹಳ್ಳದಲ್ಲಿ ಇರುವ ಕಬ್ಬಿಣದ ತುಂಡನ್ನು ಕಂಡು ಆಕರ್ಷಿತನಾದ ಬೀರಣ್ಣನು ಅತೀವ ಸಂತಸದಿಂದ ಅದನ್ನು ಕೈಯಲ್ಲಿ ಎತ್ತಿಕೊಳ್ಳುತ್ತಾನೆ ಆಗ ಅದರಲ್ಲಿ ಇದ್ದ "ನರೇಶ್ವರನು" (ಅರ್ಧನಾರೀಶ್ವರನು) ಬೀರಣ್ಣನ ಶರೀರಕ್ಕೆ ಆವಾಹನೆ ಆಗುತ್ತಾನೆ. ಬೀರಣ್ಣನು ಕಬ್ಬಿಣವನ್ನು ಹಿಡಿದುಕೊಂಡು ತನ್ನ ಮನೆಯತ್ತ ಧಾವಿಸುತ್ತಾನೆ. 
                
ಮನೆಗೆ ಬಂದ ಬೀರಣ್ಣ ಆ ಕಬ್ಬಿಣದ ತುಂಡನ್ನು ಮನೆಯ ಕನ್ನಿಮೂಲೆಯಲ್ಲಿ ಇಟ್ಟು ತನ್ನ ತಂದೆ-ತಾಯಿಗಳಿಗೆ ತೋರಿಸುತ್ತಾನೆ. ಆಗ ಅವರು ಮಗ ಇದರಲ್ಲಿ ನಮಗೊಂದು ಸೌದೆ,ಸೊಪ್ಪು, ಹುಲ್ಲು ಹೆರೆಯಲು ಕತ್ತಿ ಮಾಡಿಸಬೇಕು. ಆಗ ಬೀರಣ್ಣನು ಈ ಕಬ್ಬಿಣದ ತುಂಡನ್ನು ವಿಶ್ವಕರ್ಮಿಯ ಬಳಿಗೆ ಕೊಂಡು ಹೋಗಿ ಇದರಲ್ಲಿ ಒಂದು ಕತ್ತಿಯನ್ನು ಮಾಡಿಕೊಡಿ ಎಂದು ಹೇಳಿತ್ತಾನೆ.
   
ವಿಶ್ವಕರ್ಮಿಯು (ಮಠದ ಸಂಸಾರ) ಏಳು ರಾತ್ರಿ ಏಳು ಹಗಲು ಶ್ರಮಿಸಿದರೂ ಈ ಕಬ್ಬಿಣದ ತುಂಡಲ್ಲಿ ಕತ್ತಿಯ ರೂಪವನ್ನು ಬರಿಸುವಲ್ಲಿ ವಿಫಲನಾದನು. ಕಬ್ಬಿಣದ ತುಂಡು ಯಾವ ರೀತಿಯಲ್ಲಿ ಬಡಿದರೂ ಕತ್ತಿಯ ರೂಪ ಪಡೆಯಲಿಲ್ಲ ಬದಲಾಗಿ ಅದು ಒಂದು ದೈವದ "ಕಡ್ತಲೆಯ/ಸುರಿಯದ" (ಪಟ್ಟದ ಕತ್ತಿಯ) ಆಯವನ್ನು, ರೂಪವನ್ನು ಪಡೆಯಿತು.
          
ಈ ಸೋಜಿಗದ ಸಂಗತಿಯಿಂದ ವಿಚಲಿತರಾದ ವಿಶ್ವಕರ್ಮಿ, ಸೀಮೆಯವರು, ಬೀರಣ್ಣನನ್ನು ಕೂಡಿಕೊಂಡು. ಮಾಯಿಪ್ಪಾಡಿ ಅರಮನೆಗೆ ಧಾವಿಸುತ್ತಾರೆ ಇವರ ಬರುವಿಕೆಯನ್ನು ಕಂಡ ಮಾಯಿಪ್ಪಾಡಿ ಅರಸನು ಇವರನ್ನು ವಿಚಾರಿಸುತ್ತಾರೆ ಆಗ ವಿಶ್ವಕರ್ಮಿಯು ಆ ಕಡ್ತಲೆಯನ್ನು ಅರಸನ ಕೈಗೆ ನೀಡುತ್ತಾರೆ. ಮಾಯಾ ಶಕ್ತಿಯ ಈ ಪವಾಡಗಳನ್ನು ಕೇಳಿದ ಮಾಯಿಪ್ಪಾಡಿ ಅರಸನು ತಾನೇ ಸ್ವತಃ ಈ ಮಾಯಾ ಶಕ್ತಿಯನ್ನು ಪರೀಕ್ಷಿಸಬೇಕು  ಎಂದು ತೀರ್ಮಾನಿಸಿ ಅರಮನೆಯ ಕನ್ನಿಮೂಲೆಗೆ ಬಂದು ತಮ್ಮ ಸೊಂಟದ ಬಂಗಾರದ ಉಡಿದಾರವೊಂದನ್ನು (ಒಕ್ಕ ನೆವಲ) ತೆಗೆದು ತಾಮ್ರದ ಕೊಡಪಾನಕ್ಕೆ ಹಾಕಿ ಕೊಡಪಾನದ ಬಾಯಿಯನ್ನು ಕಟ್ಟುತ್ತಾರೆ. ಆ ಕೊಡಪಾನವನ್ನು ಅರಮನೆಯಲ್ಲಿ ಸೇರಿದ ಸಭಿಕರ ಮುಂದೆ ತಂದು ಈ ಬಾಯಿ ಕಟ್ಟಿದ ಕೊಡದಲ್ಲಿ ಏನಿದೆ ಎಂದು ತಿಳಿಸುವಂತೆ ಬೀರಣ್ಣನಲ್ಲಿ ಕೇಳುತ್ತಾರೆ. 

ಆಗ ಬೀರಣ್ಣನು ವಿಚಲಿತನಾಗದೆ ಆ ಕೊಡದಲ್ಲಿ ಕೃಷ್ಣಸರ್ಪ ಇದೆ ಎಂದು ಹೇಳುತ್ತಾನೆ. ಬೀರಣ್ಣನು ಆ ರೀತಿ ನುಡಿದ ಕ್ಷಣವೇ ತಾಮ್ರದ ಕೊಡವು ಸ್ಫೋಟ ಗೊಂಡು ಅದರಿಂದ ಕೃಷ್ಣ ಸರ್ಪವು ಬುಸುಗುಡುತ್ತಾ ಹೊರಬರುತ್ತದೆ. (ಅಂಗಾರೆದಿನ ಸಿಂಗಂದ ರಾಶಿಡಾನಿ ಚೊಂಬುದ ಕೊಡಪಾನನ್ ಪುಡತ್ತ್'ದ್ ಒಕ್ಕನೆವಲದ ಬದಲ್'ಗ್, ಕೃಷ್ಣ ಸರ್ಪದ ರೂಪಡ್ ಬತ್ತಿನ ಸತ್ಯ)

ಆಗ ಮಾಯಿಪ್ಪಾಡಿ ಅರಸನು ಆವೇಶಿತ ಬೀರಣ್ಣನಲ್ಲಿ ನೀನು ಮಾಯಾಶಕ್ತಿ ಹೌದಾದರೆ ಯಾರು ನೀನು ಎಂದು ಕೇಳುತ್ತಾರೆ. ಆಗ ಬೀರಣ್ಣನು ತಾನು "ಕೈಲಾಸದಿಂದ ಕುಂಬ್ಳೆ ಮೂರುಸಾವಿರ ಸೀಮೆಗೆ ಧರ್ಮ ದೈವವಾಗಿ ನೆಲೆಸಲು ಬಂದವ, ಬೀರಣ್ಣ ಎಂಬ ಹೆಸರಿನ ಈ ಹುಡುಗನಿಗೆ ಕಬ್ಬಿಣದ ತುಂಡಿನ ರೂಪದಲ್ಲಿ ಸಿಕ್ಕಿದ  ನರೇಶ್ವರ (ಅರ್ಧನಾರೀಶ್ವರ) ನಾನು ಎಂದು ಹೇಳಿದನು.ಆಗ ಅರಸನು ಬೀರಣ್ಣನಲ್ಲಿ ಸೇರಿಕೊಂಡ ಮಾಯಾ ಶಕ್ತಿಯಾದ ನಿನಗೇನು ಬೇಕು ಎಂದು ಕೇಳಿದಾಗ ನರೇಶ್ವರನು ಆವೇಶಗೊಂಡು ಬೀರಣ್ಣನು ತನಗೆ ಕುಂಬಳೆ ಸೀಮೆಯ ಪಟ್ಟದ ಅಧಿಕಾರ ಬೇಕು ಎಂದು ಹೇಳುತ್ತಾನೆ.
            
ಆ ಕ್ಷಣದಲ್ಲಿ ಅರಸ ವಿಶ್ವಕರ್ಮಿಯು ಮಾಡಿದ ಆ ಹೊಸ ಪಟ್ಟದ ಕಡ್ತಲೆಯನ್ನು ಬೀರಣ್ಣನ ಕೈಗಿತ್ತು  ಹಿಡಿದುಕೊ ಪಟ್ಟದ ಕತ್ತಿ  ಪಟ್ಟದ ದೈವ ಬೀರ್ನಾಳ್ವ ಎಂದು ನೀಡುತ್ತಾರೆ. (ಪತ್ತೊನ್ಲ ಪಟ್ಟದ ಕತ್ತಿ ಪಟ್ಟದ ದೈವ ಬೀರ್ನಾಳ್ವ)
          
ಆ ಕ್ಷಣ ಪಾರ್ವತಿ ದೇವಿಯು ಬೀರ್ನಾಳ್ವನಿಗೆ ನಾನು ಬೀರಣ್ಣ ಎಂಬ ಹುಡುಗನಿಗೆ ಸಿಕ್ಕಿದ ದೈವ ಈ ಹುಡುಗ ನನ್ನ ಅಧೀನದಲ್ಲಿ ಬೇಕು, ನಿನಗೆ ಸೊಂಟದಿಂದ ಕೆಳಕ್ಕೆ ಪುರುಷ ರೂಪ, ಸೊಂಟದಿಂದ ಮೇಲಕ್ಕೆ ಸ್ತ್ರೀ ರೂಪದಲ್ಲಿ ನಾನಿರುತ್ತೇನೆ ಎಂದು ಆಶಿರ್ವಾದಿಸುತ್ತಾರೆ. ಅಂದಿಗೆ ಬೀರಣ್ಣನು ಕುಂಬಳೆ ಸೀಮೆಯಲ್ಲಿ "ಪಟ್ಟದ ದೈವ ಬೀರ್ನಾಳ್ವ" ಎಂದು ಹೆಸರು ಪಡೆಯುತ್ತಾನೆ".
                
ಹೀಗೆ ಕುಂಬಳೆ ಮೂರು ಸಾವಿರ ಸೀಮೆಯ ಪಟ್ಟವು ತನಗೆ ಸಿಕ್ಕಿದ ಸಂತಸದಿಂದ ಬೀರ್ನಾಳ್ವ ದೈವವು ತನಗೂ ಈ ಸೀಮೆಯಲ್ಲಿ ನಾಲ್ಕು ಸ್ಥಾನಗಳು ಬೇಕು ಎಂದು ತೀರ್ಮಾನಕ್ಕೆ ಬಂದು... "ಬೋಳ, ಮುಕ್ಕೂರು, ಕುಂಡಾಪು,ಕೊಂಟೆಂಜ"ಎಂಬ ಹೆಸರಿನ ನಾಲ್ಕು ಸ್ಥಾನವನ್ನು ನಿರ್ಮಿಸಿಕೊಳ್ಳುತ್ತದೆ. ಹಾಗೆಯೇ ತಾನು ಕುಂಬಳೆ ಸೀಮೆಯ ಪಟ್ಟದ ದೈವವಾದ ಕಾರಣ ಸೀಮೆಯ ವ್ಯಾಪ್ತಿಯಲ್ಲಿ ತನಗೆ ಆರಾಧನೆ ಪಡೆಯುವ ಎಲ್ಲಾ ಕಡೆಯೂ ಬಲಭಾಗದ ಶಕ್ತಿಯಾಗಿ ನೆಲೆಯಾಗುತ್ತದೆ.ಇಂದಿಗೂ ಕೂಡಾ ಬೀರ್ನಾಳ್ವ ದೈವವು ಮೂಲ ಕಡಾರು, ವಳಮಲೆ, ಕುಂಬ್ಡಾಜೆ, ನೆಕ್ರಾಜೆ, ಬೋಳ, ಮುಕ್ಕೂರು, ಕುಂಡಾಪು, ಕೋಟೆಂಜ ಎಂಬ ಹೆಸರಿನ ಬಂಟ ಸಮುದಾಯದ ತರವಾಡು ಮನೆಯಲ್ಲಿ ಕುಟುಂಬದ ಅಧಿಪತಿ ಧರ್ಮದೈವ ಬೀರ್ನಾಳ್ವನಾಗಿ ಆರಾಧನೆ ನಡೆಯುತ್ತದೆ.

ಹಾಗೆಯೇ ತೆಂಕಣ ತುಳುನಾಡಿನ ಬಹುತೇಕ ಬಂಟ ಸಮುದಾಯದ ತರವಾಡು ಮನೆಯಲ್ಲಿ ಧರ್ಮ ದೈವವಾಗಿ ಬೀರ್ನಾಳ್ವನಿಗೆ ಆರಾಧನೆ ನಡೆಯುತ್ತದೆ.ಅಲ್ಲದೆ ಬೊಳಿಂಜಗುತ್ತು ಕಿನ್ನಿಗೋಳಿ ಮಾಡ, ಬಂಬ್ರಾಣ, ಶ್ರೀಪೂಮಾಣಿ ಕಿನ್ನಿಮಾಣಿ ಕ್ಷೇತ್ರ ಅಂಬಿಲಡ್ಕ, ಬದಿಯಡ್ಕದ ಶ್ರೀಪೂಮಾಣಿ ಕಿನ್ನಿಮಾಣಿ ಕ್ಷೇತ್ರ, ಮತ್ತು ಮಲೆಯಾಳಿ ಗಾಣಿಗರ ಪ್ರಮುಖ ಕ್ಷೇತ್ರ ಶ್ರೀಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಅಲ್ಲಿನ ಪ್ರಮುಖ ದೈವಗಳೊಂದಿಗೆ ಆರಾಧನೆ ನಡೆಯುತ್ತದೆ.
         
ಮಾಯಿಪ್ಪಾಡಿ ಅರಮನೆಯ ಪಟ್ಟದ ಅಧಿಕಾರವು ಬೀರಣ್ಣನಿಗೆ ಅರಸನು ನೀಡಿದ ಕಾರಣ ಇಂದಿಗೂ ಮಾಯಿಪ್ಪಾಡಿ ಅರಮನೆಯಲ್ಲಿ ನೂತನ ಅರಸರಿಗೆ ಪಟ್ಟಾಭಿಷೇಕ ಮಾಡುವ ಕ್ರಮ ಇಲ್ಲ. (ಅದು ಬೋಳ ಗುತ್ತಿನವರ ಇಚ್ಲಂಪ್ಪಾಡಿ ಮನೆ ಪಡಿಪ್ಪಿರೆಯಲ್ಲಿ ಆಗುವಂತದ್ದು)

ಬರಹ : ರೋಹಿತ್ ಬಿರ್ವ ಪಡುಮಲೆ.
(ಮಾಹಿತಿ : ಶ್ರೀವಿಶ್ವನಾಥ ಪರವ ಪಡುಮಲೆ - ದೈವ ನರ್ತಕರು ಕುಂಬಳೆ ಸೀಮೆ ) (ಸಹಕಾರ - ಶ್ರೀನಾಗಪ್ಪ ಪರವ ಪಡುಮಲೆ. ಉಳ್ಳಾಕುಲು ದೈವಗಳ ಪ್ರಧಾನ ನರ್ತಕರು ಕುಂಬಳೆ ಸೀಮೆ / ಡಾ.ರವೀಶ್ ಪರವ ಪಡುಮಲೆ ದೈವ ನರ್ತಕರು ಹಾಗೂ ಸಿವಿಲ್ ಇಂಜಿನಿಯರ್) 

..
Read Post | comments

ಜನಪದರ ದೈವ ಕಲ್ಪನೆ

ಲೇಖಕರು : ಡಾ. ಎಸ್.ಎಂ. ಮುತ್ತಯ್ಯ

ಇಂದಿನ ಸಮಾಜದಲ್ಲಿ ದೇವರ ಸಂಬಂಧದ ವಿಷಯಗಳು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಆದಿಮಾನವನ ದೇವರ ಸೃಷ್ಟಿಯ ಹಿಂದಿರುವ ಮಾನವಪರವಾದ ಆಲೋಚನೆಗಳಲ್ಲಿ ಗಂಭೀರವಾದ ಪಲ್ಲಟಗಳಾಗಿರುವುದು. ಇದಕ್ಕೆ ಪ್ರಮುಖ ಕಾರಣವಾಗಿದೆ. 

ದೇವರು ಮನುಷ್ಯನನ್ನು ಕಾಪಾಡುವ ಮುಖ್ಯ ಉದ್ದೇಶದಿಂದ ಹುಟ್ಟಿದ್ದು. ಆದರೆ ಕಾಲಾನಂತರ ಮನುಷ್ಯರೇ ದೇವರನ್ನು ರಕ್ಷಿಸಬೇಕಾದ ದುರಂತ ಒದಗಿದೆ.

 ಇಂಥ ಸಂದರ್ಭದಲ್ಲಿ ದೇವರ ಸೃಷ್ಟಿಯ ಆರಂಭಿಕ ಉದ್ದೇಶ ಹಾಗೂ ಸ್ವರೂಪಗಳನ್ನು ತಿಳಿಯುವ ಅಗತ್ಯತೆ ಇಂದು ಅನಿವಾರ್ಯವಾಗಿದೆ. ಈ ಉದ್ದೇಶದಿಂದ ದೇವರ ಆರಂಭಿಕ ಸ್ಥಿತಿಯನ್ನು ತಿಳಿಯುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಜನಪದ ಸಮಾಜಗಳು ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು-ಧರ್ಮವನ್ನು; ಇವರ ಧರ್ಮಕ್ಕೆ ಒಬ್ಬ ಸಂಸ್ಥಾಪಕನಾಗಲಿ, ಒಂದು ಧಾರ್ಮಿಕ ಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ ವಾರಸುದಾರರೆ ಆಗಿರುತ್ತಾರೆ. ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ ಆಚರಣೆ ಮತ್ತು ಕಲ್ಪನೆಗಳೇ ಇವರ ಧರ್ಮ ಗ್ರಂಥಗಳು. 

ಇವು ಶಿಷ್ಟಧಾರೆಯ ಧರ್ಮ ಗ್ರಂಥಗಳಂತೆ ಜಡವಾದವುಗಳಲ್ಲ. ಬದಲಿಗೆ ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಜನಪದ ಲೋಕದಲ್ಲಿ ಪ್ರಕೃತಿಯೇ ಪ್ರಧಾನ ದೈವ . ಹಾಗೇಯೇ ತಮ್ಮ ಸಮಾಜ - ಸಂಸ್ಕೃತಿ ಉದ್ಧಾರಕ್ಕೆ ದುಡಿದ ನಾಯಕರೇ ನಿಜವಾದ ದೇವರುಗಳು.

ಇನ್ನೂ ಕೂತೂಹಲದ ಸಂಗತಿಯೆಂದರೆ ತಮ್ಮ ಬದುಕಿಗೆ ಸಹಾಯವಾಗಿ ಬಂದ ಎಲ್ಲಾ ವಸ್ತು ವಿಷಯಗಳೂ ದೇವರುಗಳೇ. ಈ ಕಾರಣಕ್ಕಾಗಿ ಜನಪದರ ದೈವ ಸಮೂಹ ಅಗಣಿತವಾದದು. 

'ಇಷ್ಟೆಲ್ಲ ದೊಡ್ಡ ಸಮೂಹವಿದ್ದರೂ ಯಾವ ದೇವರು ತನ್ನ ಭಕ್ತರಲ್ಲಿ ಪರಸ್ಪರ ಸಂಘರ್ಷಗಳನ್ನು ಉಂಟುಮಾಡಿಲ್ಲ. ಭಕ್ತರಿಗೆ ಯಾವುದೇ ಆಮಿಷವೊಡ್ಡಿಲ್ಲ. ಅತ್ಯಂತ ಮಾನವೀಯ ವಾತವರಣದೊಂದಿಗೆ ಬದುಕುವ ಸಂದರ್ಭಗಳನ್ನು ಸೃಷ್ಟಿಸಿವೆ.'

ನಮ್ಮ ಸಮಕಾಲೀನ ಸಂದರ್ಭದಲ್ಲಿ ಪ್ರಚಲಿತವಿರುವ ದೈವ ಕಲ್ಪನೆಗಳನ್ನು ಕಂಡರೆ ಯಾರಿಗಾದರೂ ಬೇಸರವೆನಿಸುತ್ತದೆ.

ವೈದಿಕ ಪರಂಪರೆಯ ದೈವಗಳು ಪಾರಂಪರಿಕ ದೈವಗಳ ಮೇಲೆ ನಿರಂತರವಾಗಿ ನಡೆಸುತ್ತಾ ಬಂದಿರುವ ದಾಳಿಗಳ ಕಾರಣದಿಂದ ಇಂದು ದೇವರ ಹೆಸರಲ್ಲಿ ಹೊಟ್ಟೆಹೊರೆಯುವವರ ಸಂಖ್ಯೆ ಜಾಸ್ತಿಯಾಗಿದೆ.

ಇಂಥವರಿಂದ ಭಕ್ತರ ಶೋಷಣೆ ಹೆಚ್ಚು ಹೆಚ್ಚು ನಡೆದಿದೆ.

"ಆಧುನಿಕ ಸಮಾಜದ ವಿಜ್ಞಾನದ ವಿಚಾರಗಳು ದೈವ ಕಲ್ಪನೆಯನ್ನು ಸಡಿಲಗೊಳಿಸಿದರ ಪರಿಣಾಮ ಇದರ ಫಲ ಪಡೆದ ಜನ #ದೈವಗಳನ್ನೆ ಶೋಷಿಸುವ ಮಟ್ಟಕ್ಕಿಳಿದ್ದಿದ್ದಾರೆ."

 ದೇವರ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ದೇವಾಲಯ ಹಾಗೂ ಮಠಗಳು ಕೂಡ ಹಣ-ಆಸ್ತಿ ಗಳಿಕೆಯಲ್ಲಿ ಪೈಪೋಟಿ ನಡೆಸುತ್ತಿರುವುದು ನಮ್ಮ ಕಾಲದ ದುರಂತ. ಇಂಥ ಸಂದರ್ಭದೊಳಗೆ ನಿಜವಾದ ಭಕ್ತಿಯುಳ್ಳ ಯಾರನ್ನು ಹಿಂಸಿಸದ, ನಿಜವಾದ ಮಾನವ ಪ್ರೇಮವನ್ನು ಕಾಪಿಡುವ ಜನಪದರ ದೈವ ವ್ಯವಸ್ಥೆ ಇಂದು ನಮ್ಮೆಲ್ಲರ ಅಗತ್ಯವಾಗಿದೆ.           

ಪ್ರಸ್ತುತ ಸಮಾಜದ ಹಲವಾರು ಆತಂಕ ಹಾಗೂ ಸಮಸ್ಯೆಗಳಿಗೆ ಧರ್‍ಮಗಳು ಬಹುಮುಖ್ಯ ಕಾರಣವಾಗಿವೆ. #ಬರಹ ಹಾಗೂ #ಉನ್ನತ ವರ್ಗಗಳಿಗೆ ಸೇರಿದ ಪ್ರಧಾನ ಧಾರೆಯ ಧರ್‍ಮಗಳು ಪಾರಂಪರಿಕವಾಗಿ ಬೆಳೆದು ಬಂದ ದುಡಿಮೆಯ ಆಧರಿತ ಸೇವಾ ವೃತ್ತಿಗಳನ್ನು ಮೂಲೆ ಗುಂಪಾಗಿಸಿವೆ. ಅಷ್ಟೇ ಅಲ್ಲದೆ ಸಮಾಜದ ಶ್ರೇಣೀಕರಣ ವ್ಯವಸ್ಥೆಯನ್ನು ಸಮರ್ಥಿಸುವ ಮೂಲಕ ಸಮಾಜದ ಸಮುದಾಯಗಳಲ್ಲಿ ಮತೀಯ ಮತ್ಸರಗಳನ್ನು ಹೆಚ್ಚಿಸಿವೆ. ಹೀಗಾಗಿಯೇ ಹಿಂದೆಂದೂ ಕಾಣದಂತಹ ಕೋಮುಗಲಭೆಗಳು ಮತ್ತು ಹಿಂಸಾಚಾರಗಳು ತಲೆ ಎತ್ತಿ ನಿಂತಿವೆ. ಚಲನಶೀಲತೆಯಿಲ್ಲದ ಈ ಕರ್ಮಠ ಧರ್‍ಮಗಳಲ್ಲಿ ಯಾವುದೇ ರೀತಿಯ ಪರಿವರ್ತನೆಯ ಮನಸ್ಸಿಲ್ಲ. ಇಂಥ ಸ್ಥಿರ ಮನೋಭಾವ ತನ್ನ ಶಕ್ತಿ-ಸಾಮರ್ಥ್ಯ ಹಾಗೂ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದಿಕ್ಕಿನತ್ತ ಹೆಚ್ಚು ಒಲವು ತೋರುತ್ತಿದೆ. ಆ ಮೂಲಕ ಸಮಾಜದ ಶಾಂತಿಗಾಗಿ ದುಡಿಯಬೇಕಿದ್ದ ಧರ್‍ಮಗಳು ಅಶಾಂತಿಯನ್ನು ಸೃಷ್ಟಿಸುವ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಾನವ ಸಮಾಜ ಶಾಂತಿಗಾಗಿ ಆತೊರೆಯುತ್ತಿದೆ. ಇವರಿಗೆ ಶಾಂತಿ ಸಿಗುವುದಾದರೂ ಎಲ್ಲಿಂದ? ಅದು ನಮ್ಮ ಪಾರಂಪರಿಕವಾದ ಚಲನಶೀಲ ಜನಪದ ಸಂಸ್ಕೃತಿಯೊಳಗಿನ ಧರ್‍ಮಗಳಿಂದ ಮಾತ್ರ ಸಾಧ್ಯವೆಂಬುದರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. 

ಜನಪದ ಧರ್ಮ ಮತ್ತು ದೇವರು

            ಜನಪದ ಸಮಾಜಗಳು ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು-ಧರ್ಮವನ್ನು; ದೇಹ ಪ್ರಧಾನ ಕಾಯಕ ಮೌಲ್ಯವನ್ನು; ಸಮಷ್ಟಿಯ ಹಿತಾಸಕ್ತಿಯನ್ನು; ಭೌತಿಕ ಸಂಪತ್ತಿನ ನಿರಾಕರಣೆಯ ಭಾವನೆಯನ್ನು; ಮನುಷ್ಯನಿಗಿಂತ ಹೆಚ್ಚಾಗಿ ಪ್ರಕೃತಿ ಕೇಂದ್ರಿತ ಮನೋಭಾವನೆಯನ್ನು; ದ್ವೇಷರಹಿತ ಅಪ್ಪಟ ಮಾನವೀಯ ಅಂತಃಕರಣವನ್ನು; ವ್ಯವಹಾರಿಕವಲ್ಲದ ನಿಜವಾದ ಮಾನವೀಯ ಸಂಬಂಧದ ಬಂಧುತ್ವವನ್ನು. ಇವೆಲ್ಲ ಭಾವನೆಗಳ ಮೂಸೆಯಲ್ಲಿ ಮೂಡಿ ಅನೇಕ ತಿರುವುಗಳಲ್ಲಿ ಬೆಳೆದ ಜನಪದ ಸಂಸ್ಕೃತಿಯಲ್ಲಿ ಕಂಡು ಬರುವ ದೇವರು-ಧರ್ಮದ ಸ್ವರೂಪವನ್ನು ತಿಳಿಯುವುದು ಅತ್ಯಂತ ಕೂತೂಹಲಕರ ಸಂಗತಿಯಾಗಿದೆ. ಸಂಸ್ಕೃತಿಗೂ ಧರ್‍ಮಕ್ಕೂ ನಿಕಟ ಸಂಬಂಧವಿದೆ. ಸಂಸ್ಕೃತಿಯನ್ನು ರೂಪಿಸುವಲ್ಲಿ ಧರ್‍ಮದ ಪಾತ್ರ ದೊಡ್ಡದು. 

#ಜನಪದರ ಧರ್ಮಕ್ಕೆ ಒಬ್ಬ #ಸಂಸ್ಥಾಪಕನಾಗಲಿ, ಒಂದು #ಧರ್ಮಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ ವಾರಸುದಾರರೆ ಆಗಿರುತ್ತಾರೆ. ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ ಆಚರಣೆ ಮತ್ತು ಕಲ್ಪನೆಗಳೇ ಇವರ ಧರ್‍ಮ ಗ್ರಂಥಗಳು. ಇವು ಶಿಷ್ಟಧಾರೆಯ ಧರ್‍ಮಗ್ರಂಥಗಳಂತೆ ಜಡವಾದವುಗಳಲ್ಲ. ಬದಲಿಗೆ ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಈ ಹಿನ್ನೆಲೆಯೊಳಗೆ ಕನ್ನಡ ಜನಪದ ಲೋಕದಲ್ಲಿ ಕಂಡು ಬರುವ ದೇವರ ಕಲ್ಪನೆಗಳನ್ನು ಈ ಮುಂದಿನಂತೆ ವಿವರಿಸಬಹುದು.

           ’ಜನಪದ ಧರ್ಮವು ಲಿಖಿತ ಪಠ್ಯ, ಆ ಮೂಲಕ ಏರ್ಪಟ್ಟ ತಾತ್ವಿಕ ಚಿಂತನೆಯ ಮೂಲಕ ಆಕಾರ ಪಡೆದುದ್ದಲ್ಲ. ಅದು ಬಹುಮಟ್ಟಿಗೆ ಅನುಕರಣೆ ಮತ್ತು ಆಚರಣೆಗಳಿಂದ ಹರಿದು ಬಂದಿದ್ದು, ಅತಿಮಾನುಷ ಕಲ್ಪನೆ, ಅಲೌಕಿಕ ಜೀವಿಗಳ ಆರಾಧನೆ ಹಾಗೂ ಅನೇಕ ಬಗೆಯ ಧಾರ್ಮಿಕ ನಂಬಿಕೆಗಳಿಂದ ಕೂಡಿದೆ’. ಇದರಲ್ಲಿ ಕಂಡು ಬರುವ ಆಚಾರ - ವಿಚಾರಗಳು, ನಡಾವಳಿಗಳು, ನಂಬಿಕೆಗಳು ಕಲೆಗಳು ಮತ್ತು ಹುಟ್ಟು-ಸಾವುಗಳ ಮಧ್ಯೆ ಅನುಸರಿಸಲೇ ಬೇಕಾದ ಸಂಪ್ರದಾಯಗಳು, ಜನರ ಜೀವನ ವಿಧಾನ ಮತ್ತು ಅದರ ಮನೋ ದೃಷ್ಟಿಯನ್ನು ಪ್ರತಿನಿಧಿಸುತ್ತವೆ. ತಾವು ಪರಿಪಾಲಿಸುವ ಧರ್ಮಗಳ ಧೇಯೋದ್ದೇಶಗಳ ಅರಿವಿಲ್ಲವಾದರೂ ತಮ್ಮ ಸುತ್ತ ನಮ್ಮನ್ನು ಕಾಪಾಡುವ ಒಂದು ಶಕ್ತಿಯಿದೆ ಎಂಬುದನ್ನು ಜನಪದರು ನಂಬುತ್ತಾರೆ. ಹೀಗಾಗಿ ಅವರು ಸೂರ್ಯ,ಚಂದ್ರ,ನೀರು,ಬೆಟ್ಟ-ಗುಡ್ಡಗಳು, ದಟ್ಟವಾದ ಕಾಡು ಎಲ್ಲವುಗಳಲ್ಲೂ ದೈವತ್ವವನ್ನು ಅರಸುತ್ತಾರೆ. ಇವುಗಳ ಒಡೆಯನೇ ಆ ಪ್ರದೇಶದಲ್ಲಿ ವಾಸವಾಗಿದ್ದು, ಕಾಯಿಲೆ ಮತ್ತು ಅನಿಷ್ಟಗಳಿಗೆ ಆತನೇ ಕಾರಣನೆಂದು ನಂಬಿ ಅವುಗಳನ್ನು ಪೂಜಿಸುತ್ತಾರೆ. ಇಂಥ ’ಸರ್ವಚೇತನವಾದ’ ವಾಸ್ತವವಾಗಿ ಜನಪದ ಧರ್ಮದ ಅಡಿಗಲ್ಲಾಗಿದೆ ಎಂದು ಹೇಳಬಹುದು. ಗಮನಿಸಬೇಕಾದ ಸಂಗತಿ ಎಂದರೆ ಜನಪದ ಸಂಸ್ಕೃತಿಯ ಧಾರ್ಮಿಕ ಸ್ತೊತ್ರ, ಸ್ತುತಿ, ಪ್ರಾರ್ಥನೆಗಳಿಲ್ಲ. ಬದಲಿಗೆ ಒತ್ತಾಯದ, ಒತ್ತಡದ, ಬಲತ್ಕಾರದ ಗೇಲಿಯ ನಿಲುವಿದೆ. ಜನಪದರ ಬದುಕು ರಾಜಶಕ್ತಿಗಿಂತ ಹೆಚ್ಚಾಗಿ ಧರ್ಮ ಶಕ್ತಿಯನ್ನು ಆಧರಿಸಿದೆ. ತಮ್ಮ ಜಾಯಮಾನಕ್ಕೆ ಒಗ್ಗುವ ರೀತಿಯಲ್ಲಿ ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮವೊಂದನ್ನು ರೂಪಿಸಿಕೊಂಡ ಜನಪದರ ಕಲ್ಪನೆಯ ದೇವರು ಪ್ರತಿಷ್ಟಿತ ಶಕ್ತಿಗಿಂತಲೂ ತೀರಾ ಭಿನ್ನವಾದುದು. 

ಪ್ರಕೃತಿ : ಆರಾಧನೆ ಮತ್ತು ಅನುಸಂಧಾನ

             ’ಪ್ರಕೃತಿ ಪೂಜೆ ಜನಪದ ಧರ್‍ಮದ ಪ್ರಧಾನ ಲಕ್ಷಣ. ತಾವು ವಾಸಿಸುವ ಭೂಮಿ, ಸಮೀಪದ ಕಡಲು, ಶಾಖ ಮತ್ತು ಬೆಳಕನ್ನು ನೀಡುವ ಸೂರ್‍ಯ-ಚಂದ್ರ, ವಿವಿಧ ಉಪಯೋಗಗಳಿಗೆ ಬರುವ ಮರ-ಗಿಡ-ಬಳ್ಳಿಗಳು ಜನಪದರ ಆರಾಧ್ಯ ದೈವಗಳು. ಜನಪದರ ಪ್ರಕೃತಿಯ ಪೂಜೆಯ ಹಿಂದೆ ಕೃತಜ್ಞತೆಯ ಭಾವನೆಯಿದೆ. ಪ್ರಕೃತಿಯನ್ನು ಅವಲಂಬಿಸಿ ಬದುಕಿದ ಮನುಷ್ಯನಿಗೆ ಅದರ ಒಡನಾಟದಲ್ಲಿ ಆದ ನೋವು -ನಲಿವು ದೈವ ಸ್ವರೂಪವನ್ನು ಕಂಡಿವೆ. ಮುಖ್ಯವಾಗಿ ಪ್ರಕೃತಿಯಲ್ಲಿನ ಭಯ ಹುಟ್ಟಿಸುವ ವಸ್ತು-ವಿಷಯಗಳನ್ನು; ವಿಸ್ಮಯ ಮೂಡಿಸಿದ ಘಟನೆಗಳನ್ನೂ ದೇವರೆಂದು ಆರಾಧಿಸಿದ ಪರಿಕ್ರಮ ಇಲ್ಲಿದೆ. ಜನಪದ ದೈವ ಕಲ್ಪನೆಯ ಚರಿತ್ರೆಯಲ್ಲಿ ಮೊದಲ ಹೆಜ್ಜೆ ಎಂದರೆ ಪ್ರಕೃತಿಯ ಭಯ-ವಿಸ್ಮಯಗಳನ್ನು ಅನುಸಂಧಾನಗೊಳಿಸಿದ ಕ್ರಮ. ಮುಖ್ಯವಾಗಿ ಪ್ರಕೃತಿಯ ಜೊತೆ ನಡೆಸಿದ - ಬೆಳೆಸಿದ ಸಂಬಂಧಗಳ ಸ್ವರೂಪದಲ್ಲಿ ಜನಪದರ ದೈವ ಕಲ್ಪನೆ ಒಡಮೂಡಿದೆ. ಪ್ರಕೃತಿಯ ಭಾಗವಾದ ಸೂರ್‍ಯ-ಚಂದ್ರ-ಭೂಮಿ-ಆಕಾಶ, ನೀರು-ಗಾಳಿ, ಮಳೆ-ಬೆಳೆ ಇವುಗಳನ್ನು ಜನಪದರು ದೇವರೆಂದು ಪೂಜಿಸಿದ್ದಾರೆ. ಅದರಲ್ಲೂ ’ಭೂಮಿ’ ಮಣ್ಣಿಗೆ ಹತ್ತಿರವಾಗಿ ಬದುಕಿದ ಜನಪದ ಸಮುದಾಯಗಳಿಗೆ ಶ್ರೇಷ್ಟ ದೈವ. ಹಾಗಾಗಿ ಜನಪದ ತ್ರಿಪದಿಯೊಂದು ಭೂಮಿ ತಾಯಿಗೆ ಎಂಥ ಸ್ಥಾನವಿದೆ ಎಂಬುದನ್ನು ಹೀಗೆ ಸ್ಪಷ್ಟಪಡಿಸುತಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ|

  ಎಳ್ಳು ಜೀರಿಗೆ ಬೆಳೆವಂಥ| ಭೂಮಿ ತಾಯಿನ|

  ಎದ್ದೊಂದು ಗಳಿಗೆ ನೆನೆದೇನ||

 ಈ ಸಾಲುಗಳು, ಇರುವ ಅನಂತ ದೈವಗಳ ನಡುವೆ ಭೂಮಿ ತಾಯಿ ದೊಡ್ಡವಳು; ಹಾಗಾಗಿಯೇ ಅವಳಿಗೆ ಮೊದಲ ಸ್ಥಾನ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಹೀಗೆ ಭೂಮಿಯನ್ನು ತಾಯಿಯೆಂದು ತಿಳಿದ. ಸಮುದಾಯಗಳ ಪ್ರಜ್ಞೆ ಅನುಭವಜನ್ಯವಾದುದು. ಹುಟ್ಟಿನಿಂದ ಸಾವಿನವರೆಗೂ ಮನುಷ್ಯ ಭೂಮಿಯಿಂದ ಪಡೆಯುವ ಸಹಾಯವೆಷ್ಟು? ಆದರೆ ಇತ್ತೀಚಿನ ದಿನಮಾನದಲ್ಲಿ ಭೂಮಿಯ ಗರ್ಭವನ್ನು ಬಸಿದ ಆಧುನಿಕರ ಜ್ಞಾನ ಯಾಕಾಗಿ ಈ ಪರಂಪರೆಯನ್ನು ನಿಲಕ್ಷಿಸಿತು ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಭೂಮಿಯಂತೆ ಸೂರ್‍ಯ, ಚಂದ್ರ, ನೀರು, ಗಾಳಿ ಮಳೆ ಮೊದಲಾದವು ಮನುಷ್ಯನ ಬದುಕಿಗೆ ಅನಿವಾರ್‍ಯ ಎಂಬುದಾಗಿ ನಂಬುವ ಅವು ನೀಡಿದ ಸಹಕಾರಕ್ಕೆ ಪ್ರತಿಯಾಗಿ ಗೌರವಿಸುವ ಮನೋಭಾವದಿಂದಾಗಿ ಇವೆಲ್ಲವೂ ದೈವ ಸ್ವರೂಪಿಯಾಗಿವೆ. ಜನಪದರ ಬದುಕುಗಳಲ್ಲಿ ದೊರೆಯುವ ಪ್ರಕೃತಿ ಆರಾಧನೆಯ ಮತ್ತೊಂದು ರೂಪ ಗಿಡ-ಮರ-ಬಳ್ಳಿಗಳ ಹಾಗೂ ಪ್ರಾಣಿ ಪಕ್ಷಿಗಳ ಆರಾಧನೆ. ಇದನ್ನು ಕುಲದೇವತಾರಾಧನೆ ಪದ್ಧತಿ ಎಂದು ಕರೆಯಲಾಗಿದೆ. ಈ ಪದ್ಧತಿಯ ಅನ್ವಯ ’ಒಂದು ಸಮುದಾಯದ ಜನ ತಮ್ಮ ಕುಲದ ಮೂಲವನ್ನು ಒಂದು ಸಸ್ಯ ಅಥವಾ ಪ್ರಾಣಿಗಳಲ್ಲಿ ಆರೋಪಿಸಿಕೊಂಡು ಅವುಗಳನ್ನೇ ತಮ್ಮ ಕುಲದೇವರು ಎಂದು ಆರಾಧಿಸಿಕೊಂಡು ಬರುತ್ತಾರೆ. ತಮ್ಮ ಕುಲದೇವತೆಯ ಲಾಂಛನವಾದ ಮರ/ಸಸ್ಯವನ್ನು ಅವರು ಕಡಿಯುವುದಿಲ್ಲ ಮತ್ತು ಸುಡುವುದಿಲ್ಲ. ಪ್ರಾಣಿಯನ್ನು ಬೇಟೆಯಾಡುವುದಿಲ್ಲ ಹಾಗೂ ಆಹಾರವಾಗಿ ಸೇವಿಸುವುದಿಲ್ಲ. ಈ ಸಮುದಾಯಗಳು ಪೂಜಿಸುವ ಬನ್ನಿ, ಬೇವು, ಆಲ, ಎಕ್ಕೆ ಮೊದಲಾದವು ಕೇವಲ ಹಸಿರಲ್ಲ. ಅವುಗಳಲ್ಲಿರುವ ಔಷಧೀಯ ಗುಣವೇ ಅವುಗಳನ್ನು ಪೂಜೆಗೊಳ್ಳುವಂತೆ ಮಾಡಿದೆ. ಇಂಥಲ್ಲಿ ಮನುಷ್ಯನ ಆರೋಗ್ಯಕ್ಕೆ ಸಹಕರಿಸಿದಕ್ಕೆ ಪ್ರತಿಯಾಗಿ ಮೂಡಿದ ಕೃತಜ್ಞತಾ ಭಾವವೇ ಅವುಗಳ ಆರಾಧನೆಗೆ ಪ್ರಮುಖ ಕಾರಣವಾಗಿದೆ. ಈ ರೀತಿಯಲ್ಲಿ ಪ್ರಕೃತಿಯಲ್ಲಿ ಮನುಷ್ಯನ ಬದುಕಿಗೆ ಅನುಕೂಲವಾಗಿ ಒದಗಿಬಂದ ವಸ್ತು-ವಿಷಯಗಳನ್ನು ಗೌರವ ಮತ್ತು ಕೃತಜ್ಞತೆ ಸೂಚಿಸುವ ಸಲುವಾಗಿ ಪೂಜಿಸಿದರೆ; ಇದೇ ಮನುಷ್ಯ ಮತ್ತೊಂದು ಕಡೆ ಪ್ರಕೃತಿಯ ವಿನಾಶಿ ರೂಪಗಳನ್ನು ಪೂಜಿಸಿದ್ದಾನೆ. ಉದಾ: ಪ್ರಕೃತಿಯಲ್ಲಿರುವ ಕ್ರೂರ ಪ್ರಾಣಿಗಳು, ವಿಷಜಂತುಗಳು; ಗುಡುಗು-ಸಿಡಿಲು ಮೊದಲಾದ ಭಯವನ್ನುಂಟು ಮಾಡುವ ಪ್ರಕೃತಿಯ ವೈಚಿತ್ರಗಳು. ಗಮನಿಸಬೇಕಾದ ಸಂಗತಿ ಎಂದರೆ ಕೃತಜ್ಞತಾ ಭಾವನೆಯ ಪೂಜಾಕ್ರಮಗಳಿಗಿಂತ ಭಯದ ಭಾವನೆಯಲ್ಲಿ ಪೂಜಿಸುವ ಪೂಜಾಮಾದರಿಗಳು ಭಿನ್ನವಾಗಿರುತ್ತವೆ. ಕೃತಜ್ಞತೆಗೆ ಎಡೆ ಮಾತ್ರ ಪ್ರಧಾನವಾದರೆ ಭಯಕ್ಕೆ ಬಲಿ ಮುಖ್ಯವಾಗುತ್ತದೆ.

ಹಿರಿಯರ ಆರಾಧನೆ : ಕುಟುಂಬ ಮತ್ತು ಕುಲ

ಜನಪದರ ದೈವ ಕಲ್ಪನೆಯಲ್ಲಿ ಹಿರಿಯರ ಆರಾಧನೆ ಮತ್ತೊಂದು ಪ್ರಮುಖ ಮಜಲು. ಕುಟುಂಬದ, ಜಾತಿಯ ಹಾಗೂ ಸಮುದಾಯದ ಉದ್ದಾರಕ್ಕೆ ದುಡಿದ ಹಿರಿಯರೇ ಇಲ್ಲಿನ ದೇವರು. ಸಾಂಸ್ಕೃತಿಕ ವೀರರು ಎನ್ನುವ ಹೆಸರಿನಲ್ಲಿ ಕರೆಯಲ್ಪಡುವ ಈ ವ್ಯಕ್ತಿಗಳು ಸಮೂಹದ ಪರವಾದ ಕೆಲಸ-ಕಾರ್‍ಯಗಳ ಮೂಲಕ ಗಮನ ಸೆಳೆದು ಪೂಜನೀಯರಾಗಿರುತ್ತಾರೆ. ಕನ್ನಡ ನಾಡಿನಲ್ಲಿ ಇಂಥ ಸಾವಿರಾರು ಜನ ಸಾಂಸ್ಕೃತಿಕ ವೀರರು ಬಾಳಿ ಬದುಕಿದ್ದನ್ನು ಕಾಣಬಹುದು. ಅದರಲ್ಲಿ ಮುಖ್ಯವಾಗಿ ಮಲೆಯಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ, ಗಾದ್ರಿ ಪಾಲನಾಯಕ, ಕುಮಾರರಾಮ, ಸೇವಾಲಾಲ, ಎಲ್ಲಮ್ಮ, ಸಿರಿ, ಕೋಟಿಚನ್ನಯ್ಯ ಇಂಥ ಕೆಲವೇ ಕೆಲವರು ಮಾತ್ರ ನಮ್ಮ ಲಕ್ಷ್ಯದಲ್ಲಿದ್ದಾರೆ. ಇವರಲ್ಲದೆ ಇನ್ನು ನೂರಾರು ಜನ ಸಾಂಸ್ಕೃತಿಕ ವೀರರ ಕಥನಗಳು ಮತ್ತು ಆಚರಣೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯೊಳಗೆ ಪ್ರಚಲಿತದಲ್ಲಿವೆ. ಈ ಮಟ್ಟದ ನಾಯಕರಲ್ಲದೆ ಪ್ರತೀ ಬಳಿ, ಕುಟುಂಬಕ್ಕೂ ಹಿರಿಯರ ಪರಂಪರೆ ಇದ್ದು ಅವರು ತಾತ, ತಂದೆ, ಮೊದಲಾದ ನೆಲೆಗಳಲ್ಲಿ ದುಡಿದು ಶ್ರೇಷ್ಠರಾದ ಪೂಜನೀಯರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ. ಕುಟುಂಬ ಹಾಗೂ ಸಮುದಾಯಗಳ ಹಿರಿಯನ್ನು ಪೂಜೆ ಮಾಡುವ ಕ್ರಮಗಳು ವಿಭಿನ್ನ. ಉದಾ: ಹಿರಿಯರ ಪ್ರತಿನಿಧಿಯಾಗಿ ಕಲ್ಲು, ಕೋಲು, ಮಗೆ ಮೊದಲಾದ ವಸ್ತುಗಳನ್ನು ವ್ಯಕ್ತಿಗಳೆಂದು ಪರಿಭಾವಿಸಿ ಪೂಜಿಸಲಾಗುತ್ತದೆ. ಇತ್ತೀಚೆಗೆ ಛಾಯಾಚಿತ್ರಗಳ ರೂಪದಲ್ಲಿ ಪೂಜಿಸುವ ಪದ್ಧತಿಗಳು ಚಾಲ್ತಿಗೆ ಬರುತ್ತಿವೆ. 

ಸಹಾಯಕ್ಕೆ ಬಂದ ವಸ್ತು ಪರಿಕರಗಳು

 ಜನಪದ ಧರ್‍ಮದ ಆರಾಧನೆಯ ಭಾಗವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ತನ್ನ ಬದುಕಿಗೆ ಸಹಕರಿಸಿದ ಸೂರ್ಯ-ಚಂದ್ರ-ಭೂಮಿ; ಭಯವನ್ನುಂಟು ಮಾಡಿದ ಹಲವಾರು ಪ್ರಕೃತಿ ವಿಕೋಪಗಳು ಇಂಥ ಮಹಾನ್ ಸಂಗತಿಗಳಲ್ಲದೆ ಕೃಷಿ ಮೊದಲಾದ ವಿವಿಧ ವೃತ್ತಿಯ ಜನ ಬಳಸುವ ಸಣ್ಣ ಸಣ್ಣ ಸಲಕರಣೆಗಳು ಕೂಡ ಪೂಜನೀಯವಾಗಿವೆ. ನೇಗಿಲು, ರಂಟೆ, ಕುಂಟೆ, ಕುಡ ಮೊದಲಾದ ವಸ್ತುಗಳಿಲ್ಲದ ರೈತ; ಕೋಲು, ಮಗೆಗಳಿಲ್ಲದ ಪುಶುಪಾಲಕ; ಉಳಿ, ಬೈರಿಗೆ, ಬಾಚಿ ಇಲ್ಲದ ಬಡಗಿ; ತಿಡಿ, ಬೆಂಕಿ, ಚಮ್ಮಟಿಗೆ ಇಲ್ಲದ ಕಮ್ಮಾರ; ಮೊರ ಕಸಬರಿಗೆ ಹೊಂದಿಲ್ಲದ ಕುಟುಂಬದ ಮಹಿಳೆಯರ ಕಾಯಕ ಅದೆಷ್ಟು ಕಷ್ಟಕರ ಎಂಬುದನ್ನು ಅರಿತರೆ ಇಲ್ಲಿನ ದೈವಾರಾಧನೆಯ ಸ್ವರೂಪದ ಹಿನ್ನೆಲೆ ಅರ್ಥವಾಗುತ್ತದೆ. ಹಾಗಾಗಿಯೇ ಪ್ರತಿಯೊಂದು ವೃತ್ತಿ ಪರಿಕರಗಳನ್ನು ದೈವ ಸ್ವರೂಪಿಯೆಂದು ಭಾವಿಸಿ ಪೂಜಿಸಿದ್ದಾನೆ. ಆ ಮೂಲಕ ಗೌರವಿಸಿದ್ದಾನೆ.

ಜನಪದ ದೇವರ ವಿಶಿಷ್ಟ ಲಕ್ಷಣಗಳು 

ಕನ್ನಡ ಜನಪದ ಜೀವನದೊಳಗೆ ರೂಪುಗೊಂಡ ದೈವಗಳಲ್ಲಿ ಕಂಡು ಬರುವ ಗುಣಲಕ್ಷಣಗಳು ಹಲವಾರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: 

ದೇವರೂ ಮನುಷ್ಯರಂತೆ ಲೌಕಿಕ ಪ್ರಾಣಿ ! : ದೇವರುಗಳು ಕೂಡ ಮನುಷ್ಯನಂತೆ ಲೌಕಿಕ ಭಾವನೆಗಳನ್ನು ಹೊಂದಿವೆ. ಜನಸಮುದಾಯಗಳು ದೇವರಲ್ಲಿ ಮಾಡಿಕೊಳ್ಳುವ ಹರಕೆಯ ಸ್ವರೂಪಗಳು, ನಡೆಸುವ ಪೂಜಾವಿಧಾನಗಳು, ಬಳಸುವ ಪೂಜಾ ಸಾಮಗ್ರಿಗಳು ಇವೇ ಮೊದಲಾದ ಸಂಗತಿಗಳನ್ನು ಗಮನಿಸಿದರೆ ಮೇಲಿನ ಸಂಗತಿ ಸ್ಪಷ್ಟವಾಗುತ್ತದೆ. ಮನುಷ್ಯನ ಹಸಿವು,ಆಸೆ,ಆಮಿಷೆಗಳು ದೇವರಲ್ಲ್ಲಿಯೂ ಇರುತ್ತದೆ ಎಂಬ ತಿಳುವಳಿಕೆಯಿಂದ ಎರಡು ಬೇಟೆ ಕಡಿತೀನಿ, ೧೦೧ ಕಾಯಿ ಹೊಡಿತೀನಿ, ಸೀರೆ ಉಡುಸ್ತೀನಿ, ಆಭರಣ ಮಾಡುಸ್ತೀನಿ ಇವೇ ಮೊದಲಾದ ಹರಕೆಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗುತ್ತದೆ. ಅಷ್ಟೆ ಅಲ್ಲದೆ ಮನುಷ್ಯರಂತೆಯೇ ದೇವರುಗಳ ನಡುವೆ ಮಾನವೀಯ ಸಂಬಂಧಗಳು, ರಕ್ತ ಸಂಬಂಧದ ನೆಲೆಗಳು ಇರುತ್ತವೆ. ಸಾಮಾನ್ಯವಾಗಿ ದೇವರುಗಳ ಮಧ್ಯೆ ಗಂಡ-ಹೆಂಡತಿ, ಅಣ್ಣ-ತಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ ಸಂಬಂಧಗಳನ್ನು ಕಲ್ಪಿಸಿರುವುದು ಕಂಡುಬರುತ್ತದೆ. 

ಮುಖವಿಲ್ಲದ ದೇವರು : ಪ್ರಸ್ತುತ ಸಂದರ್ಭದಲ್ಲಿ ಶಿಷ್ಟ ಪರಂಪರೆಯ ಯಾವುದೇ ದೇವರನ್ನು ನೋಡಿದರೂ ಅವುಗಳಿಗೆ ಮನುಷ್ಯನ ಇಲ್ಲವೇ ಪ್ರಾಣಿಯ ಮುಖಗಳಿರುವುದನ್ನು ನೋಡಬಹುದು. ವಿಶೇಷವೆಂದರೆ ಮನುಷ್ಯರ ಮುಖಗಳಿರುವ ದೇವರು ಎಷ್ಟು ಶಕ್ತಿಶಾಲಿಯೆಂದು ಭಕ್ತರು ಭಾವಿಸುತ್ತಾರೋ ಅಷ್ಟು ಮುಖಗಳು ಅಷ್ಟು ಕೈಗಳು ಜಾಸ್ತಿಯಾಗುತ್ತವೆ. ಪ್ರಾಣಿಮುಖವಾದರೆ ಇಡೀ ದೇಹದ ಗಾತ್ರ ಮತ್ತು ಹಲ್ಲುಗಳು,ಉಗುರುಗಳು ಮೊದಲಾದ ಭಾಗಗಳು ಅಸಾಮಾನ್ಯ ಸ್ಥಿತಿಯಲ್ಲಿರುತ್ತವೆ. ಜನಪದ ಲೋಕದ ದೇವರುಗಳಿಗೆ ಈ ರೀತಿಯ ಯಾವುದೇ ಮುಖವಿರುವುದಿಲ್ಲ. ಮೇಲೆ ವಿವರಿಸಿದಂತೆ ಜನಪದರ ದೈವಗಳು ಒಂದು ರೀತಿಯ ಸಾಂಕೇತಿಕ ಗುರುತುಗಳು. ಉದಾಹರಣೆಗೆ ಕುಲದ ಹಾಗೂ ಕುಟುಂಬದ ಹಿರಿಯರನ್ನು ಪೂಜಿಸುವ ಕ್ರಮದಲ್ಲಿ ಆ ಹಿರಿಯರು ಬಳಸಿದ ಕೋಲು, ಆಭರಣ ಮತ್ತು ಆಯುಧ ಮತ್ಯಾವುದೋ ವಸ್ತುವಿನಲ್ಲಿ ಅವರ ರೂಪವನ್ನು ಕಂಡು ಅವುಗಳನ್ನೇ ಪೂಜಿಸುತ್ತಾರೆ. ಹಾಗೆಯೇ ಕುಟುಂಬದ ಹಿರಿಯರನ್ನು ಕೇವಲ ಒಂದು ಚಿಕ್ಕ ಕಲ್ಲಿನಲ್ಲಿ ಕಾಣುತ್ತಾರೆ.

 ಇನ್ನೂ ಪ್ರಕೃತಿ ಹಾಗೂ ವೃತ್ತಿಮೂಲದ ವಸ್ತುವಿಷಯಗಳು ನೇರ ಕಾಣುವ ರೂಪಗಳು. 

#ಪೂಜಾರಿಗೆ ಜಾಗವಿಲ್ಲ : ಈ ವ್ಯವಸ್ಥೆಯಲ್ಲಿ ದೈವ ಮತ್ತು ಭಕ್ತರ ನಡುವೆ ಸ್ತೊತ್ರ, ಸ್ತುತಿ, ಪ್ರಾರ್ಥನೆಗಳ ನಿಲುವಿನ ಸಂಬಂಧವಿಲ್ಲ. ಹಾಗಾಗಿಯೇ ಜನಪದರ ದೇವರುಗಳಿಗೆ ಪ್ರತಿಯೊಬ್ಬ ಭಕ್ತನೂ ಕೂಡ ಒಂದರ್ಥದಲ್ಲಿ ಪೂಜಾರಿಯೇ. ವಿಶೇಷವೆಂದರೆ ಈ ವ್ಯವಸ್ಥೆಯಲ್ಲಿ ದೈವ ಮತ್ತು ಭಕ್ತರ ನಡುವೆ ಅರಸ-ಆಳು ರೀತಿಯ ಸಂಬಂಧಗಳಿರುವುದಿಲ್ಲ. ಅದರ ಹೊರತಾಗಿ ಇಲ್ಲಿ ಬಂಧುತ್ವ, ಸ್ನೇಹ ರೀತಿಯ ನಂಟು ಕಂಡುಬರುತ್ತದೆ. ಹಾಗಾಗಿಯೇ ಜನಪದರು ದೇವರಲ್ಲಿ ವರವನ್ನು ಬೇಡಿ ಪಡೆಯುವುದಕ್ಕಿಂತ ಒತ್ತಾಯಮಾಡಿ ಇಲ್ಲವೇ ಬೈದು ವರಪಡೆಯುವ ಕ್ರಮಗಳೇ ಹೆಚ್ಚು. ಈ ದೈವ ವ್ಯವಸ್ಥೆಯಲ್ಲಿ ಪುರೋಹಿತಶಾಹಿಯ ಪ್ರವೇಶವಿಲ್ಲ. ದೇವರು ಮತ್ತು ಭಕ್ತರ ನಡುವೆ ಪೂಜಾರಿಯ ಕೆಲಸವೇನು? ಎಂಬುದನ್ನು ಜನಪದ ಗರತಿಯೊಬ್ಬಳು ಹೀಗೆ ಪ್ರಶ್ನಿಸುತ್ತಾಳೆ : 

    ದೇವರಿಗೆ ಬಂದೀನಿ ದಾರಿ ಬಿಡು ಪೂಜಾರಿ| 

    ದೇವರಿಗೆ ನನಗೆ ಒಳಮಾತ | ಮೈಲಾರ ಲಿಂಗನ|

              ಠಾವಿಗೋಗಿ ಕೈಯ ಮುಗಿದೇನ||

ಜಂಗಮ ಸ್ವರೂಪಿ ದೇವರು ಮತ್ತು ಗುಡಿಗಳು : ಜನಪದ ದೇವರುಗಳಲ್ಲಿ ಹಲವು ದೇವರಿಗೆ ಗುಡಿಗಳೇ ಇಲ್ಲ. ಕೆಲವು ದೇವರಿಗೆ ಗುಡಿಗಳಿವೆ ಆದರೆ ಆ ಗುಡಿಗಳು ನಮ್ಮ ಶಿಷ್ಟ ಪರಂಪರೆಯ ದೇವರುಗಳ ಗುಡಿಗಳಂತೆ ನಿಂತ ಕಟ್ಟಡದ ಸ್ಮಾರಕಗಳಲ್ಲ. ಗುಡಿಗಳನ್ನು ಹೊಂದಿರದ ದೇವರುಗಳಿಗೆ ಸ್ವತಃ ಅಸ್ತಿತ್ವವಿಲ್ಲ. ಮನೆಯಲ್ಲಿರುವ ಮಗೆ ಮತ್ತು ಕೋಲು ಸಮಯ ಬಂದಾಗ ದೇವರಾಗಿ ನಂತರ ದಿನನಿತ್ಯದ ಉಪಯೋಗಕ್ಕೆ ಬಳಕೆಯಾಗುತ್ತವೆ. ಇನ್ನು ಸಗಣಿ ಸೂಕ್ತ ಸಂದರ್ಭಕ್ಕೆ ಗಣಪನಾಗಿ ನಂತರ ಒಲೆಗಿಡುವ ಬೆರಣಿಯಾಗುತ್ತದೆ. ಹಾಗೆಯೇ ಹೊನ್ನಾರು ಹೂಡುವ ರೈತನಿಗೆ ಅಲ್ಲೇ ಇರುವ ಕಲ್ಲು ಇದಕ್ಕಿದ್ದಂತೆ ದೇವರಾಗಿ ಪೂಜೆ ಮುಗಿದ ನಂತರ ಮತ್ತೆ ಅಲ್ಲೇ ಮಣ್ಣಲ್ಲಿ ಬೆರತು ಹೋಗುತ್ತದೆ. 

ಗುಡಿಗಳನ್ನು ಹೊಂದಿರುವ ಕೆಲವಾರು ದೇವರ ಗುಡಿಗಳು ದೇವರಿಗೆ ಇಲ್ಲಿ ನಿರ್ಮಾಣವಾಗಿರುವ ಗುಡಿಗಳು ಇದ್ದರೂ ಇವು ಚಲಿಸುವ ಜಂಗಮ ಸ್ವರೂಪಿಯಾದವು. ಬಹುತೇಕ ಜನಪದ ದೈವಗಳ ನೆಲೆಗಳು ಮರದ ನೆರಳು, ಮೂರು ಬಂಡೆಗಲ್ಲುಗಳಿಂದ ಕಟ್ಟಿದ ಗುಡಿಯಲ್ಲಿ, ಬಹಳವೆಂದರೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದಾದ ಮರ ಮತ್ತು ಹುಲ್ಲಿನಿಂದ ಸೃಷ್ಟಿಸಿದ ಸುತ್ತು ಗುಡಿಸಲುಗಳಿರುತ್ತವೆ.    

ಜನಪದ ದೇವರ ಮಿತಿಗಳು

 ಈ ಸ್ವರೂಪದ ಜನಪದ ದೈವ ವ್ಯವಸ್ಥೆಯಲ್ಲಿ ದೋಷಗಳೇನು ಇಲ್ಲ ಎಂದರೆ ಒಂದು ಮುಖದ ಸತ್ಯವನ್ನು ಮಾತ್ರ ಹೇಳಿದಂತಾಗುತ್ತದೆ. ಹಾಗಾಗಿ ಇಲ್ಲಿರುವ ದೋಷಗಳನ್ನು ಗುರುತಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಜನಪದರ ದೈವ ಕಲ್ಪನೆಯಲ್ಲಿ ಕಂಡು ಬರುವ ಕೆಲವು ಮಿತಿಗಳನ್ನು ಹೀಗೆ ಗುರುತಿಸಬಹುದು

೧. ಎಲ್ಲ ಸಮಸ್ಯೆಗಳಿಗೂ ದೇವರೇ ಕಾರಣವೆಂಬ ದೃಢವಾದ ನಂಬಿಕೆಯಿಂದ ಜನಪದ ಸಮುದಾಯಗಳು ಮೂಢನಂಬಿಕೆಯ ಕಡೆಗೆ ನಡೆದದ್ದು, ತಮ್ಮ ಪೂರ್ವಿಕರ ಮೂಲ ಉದ್ದೇಶಗಳನ್ನು ಮರೆತು ಕುರುಡು ಆಚರಣೆಗಾರರಾಗಿ ರೂಪುಗೊಂಡಿದ್ದು( ಕಾರ್ಯಾಕಾರಣ ಸಂಬಂಧಗಳ ತಿಳಿವಿಲ್ಲದೆ ನಡೆಸಿದ ಆಚರಣೆಗಳು) ಉದಾ: ಉಪಯೋಗಕ್ಕಿಲ್ಲದ ವಸ್ತುಗಳನ್ನು ಪುಜಿಸಿದ್ದು- ಮೊರದ ಪೂಜೆ, 

೨. ಜನಪದರ ದೇವರ ಬಗೆಗಿನ ದೃಢವಾದ ನಂಬಿಕೆಗಳು ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವ ಇಚ್ಛೆಗಳನ್ನು ಪೂರೈಸಿಕೊಳ್ಳಲು ಅನವುಮಡಿಕೊಟ್ಟದ್ದು ( ದೇವದಾಸಿ ಪದ್ಧತಿ, ಬೆತ್ತಲೆಸೇವೆ ಇತ್ಯಾದಿ)

೩. ದೈವ ಸಂಬಂಧೀ ಆಚರಣೆಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಅಡ್ಡಿಯಾಗಿದ್ದು

ಇಂಥ ಮಿತಿಗಳನ್ನು ದಾಟುವುದಾದರೆ ನಮ್ಮ ಪಾರಂಪರಿಕ ದೈವ ಕಲ್ಪನೆ ಅನುಕರಣಾ ಯೋಗ್ಯವಾದುದು. ಹಾಗೂ ಈಗಿನ ಸಂಕಷ್ಟದ ಕಾಲಕ್ಕೆ ಸಮರ್ಥವಾದ ಪರ್‍ಯಾಯ ವ್ಯವಸ್ಥೆಯೂ ಆಗುವುದರಲ್ಲಿ ಅನುಮಾನವಿಲ್ಲ

ಲೇಖಕರು : ಡಾ. ಎಸ್.ಎಂ. ಮುತ್ತಯ್ಯ

Read Post | comments

SUDDI

tuluworld

TULUWORLD CHANNEL

Popular Posts

ANAVARANA

KATHE

PADHO-KABITHE

BARAVU

 

Copyright © 2011 Tuluworld - All Rights Reserved