Google

ICHARO

YEDDE PATHERA
Naramaniyagh ovven Kalpane malppere sadiyoundo.. Aven Padeyarala Sadhya undu.

ಮಣ್ಣಿನ ಬಗ್ಗೆ ಅಸಹ್ಯ ಭಾವನೆ ಹುಟ್ಟಿಸಿದರಿಂದಲೇ ಮಕ್ಕಳು ಮಣ್ಣಿನಿಂದ ದೂರ ಸರಿದಿದ್ದಾರೆ- ಡಾ. ಆಶಾಜ್ಯೋತಿ ರೈ ಮಾಲಾಡಿ




ಬಲೇ.. ಸಿರಿಭೂಮಿ ಬುಳೆಪಾಗ -2

ಇತ್ತೀಚೆಗೆ ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗ ಮತ್ತು ತುಳು ವರ್ಲ್ಡ್ ಸಂಸ್ಥೆಯು ಪಗ್ಗು 18 ರಂದು ಪ್ರಾರಂಭಿಸಿದ ಬಲೆ ಸಿರಿಭೂಮಿ ಬುಲೆಪಾಗ ಸರಣಿ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಬಿಜೈಯಲ್ಲಿರುವ ನಂದಿನಿ ರಘುನಂದನ್ ಮನೆಯ ವಠಾರದಲ್ಲಿ ಬಂಟರ ಯಾನೆ ನಾಡವರ ಸಂಘ ಮಹಿಳಾ ವಿಭಾಗದ ವತಿಯಿಂದ ಮರಗಿಡಗಳನ್ನು ನೆಟ್ಟು ಬಲೆ ಸಿರಿಭೂಮಿ ಬುಳೆಪಾಗ ಕಾರ್ಯಕ್ರಮಕ್ಕೆ ಮುಂದಿನ ಹೆಜ್ಜೆಯನ್ನು ಇಡಲಾಯಿತು
ಮಕ್ಕಳು ಮಣ್ಣಿನಲ್ಲಿ ಆಟ ಆಡುವಾಗ ಮಣ್ಣನ್ನು ಮುಟ್ಟುವಾಗ ಮುಟ್ಟಬೇಡಿ ಅಸಹ್ಯ ಎಂದು ಮಕ್ಕಳ ಮನಸ್ಸನ್ನು ಮಣ್ಣಿನಿಂದ ಬೇರ್ಪಡಿಸಿ ಮಕ್ಕಳಿಗೆ ಮಣ್ಣಿನ ಬಗ್ಗೆ ಕೀಳು ಭಾವನೆಯನ್ನು ಹುಟ್ಟಿಸಿದರಿಂದ ಮಕ್ಕಳು ಮಣ್ಣಿನ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಬಗ್ಗೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳು ಪ್ರಕೃತಿಯ ಬಗ್ಗೆ ತಿಳಿಯದ ಮೂಢರಾಗಿ ಬೆಳೆಯುತ್ತಾರೆ. ಕಾಂಕ್ರೀಟ್ ಆವರಣಗಳನ್ನು ಮಾಡಿ ನಾಗಬನಕ್ಕೆ ಹಾಲು ಎರೆದರೆ ಮತ್ತು ಪೂಜೆ ಸಲ್ಲಿಸಿದರೆ ಮಾತ್ರ ನಾಗನ ಅನುಗ್ರಹ ವಾಗುವುದಿಲ್ಲ. ನಮ್ಮ ಹಿರಿಯರು ಆಚರಿಸಿದ ರೀತಿಯಲ್ಲಿ ಮರ-ಗಿಡಗಳು ಬಳ್ಳಿ ಬೇರುಗಳಿಂದ ತುಂಬಿದ ಬನ ಸೃಷ್ಟಿಸಿದರೆ ಮಾತ್ರ ನಾಗಾರಾಧನೆಯ ಫಲ ಸಿಗಬಹುದು. ಆದುದರಿಂದ ಪ್ರತಿಯೊಬ್ಬರು ತಮ್ಮ ಸುತ್ತಮುತ್ತ ಇರುವ ಕಾಲಿ ಪ್ರದೇಶಗಳಲ್ಲಿ ಮರಗಿಡಗಳನ್ನು ಬೆಳೆಸಿ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈಯವರು ಹೇಳಿದರು. ಮಂಗಳೂರು ತಾಲೂಕಿನ ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗದ ಎಲ್ಲಾ ಘಟಕಗಳು ಪ್ರತಿ ತಿಂಗಳು ಕನಿಷ್ಠ 10 ಗಿಡಗಳನ್ನು ಆದರೂ ನೆಡಬೇಕೆಂದು ಕರೆಯಿತ್ತರು
ಮಂಗಳೂರಿನ ವೃಕ್ಷ ಸಂರಕ್ಷಕ ಮಾಧವ್ ಉಳ್ಳಾಲ್, ನಂದಿನಿ ರಘನಂದನ್, ಬಿ ಯೋಗಿನಿ ಶೆಟ್ಟಿ, ಪ್ರಮೋದ ಅತಿಕಾರಿ, ಚಂದ್ರಾವತಿ ರೈ, ರಾಜೇಶ್ವರಿ ಶೆಟ್ಟಿ, ಶಾಲಿನಿ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ತುಳು ವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಕಾರ್ಯಕ್ರಮ ನಿರ್ವಹಣೆ ಮಾಡಿದರು.


Share on :

SUDDI

 

Copyright © 2011 Tulu World - All Rights Reserved