Google

ICHARO

YEDDE PATHERA
Naramaniyagh ovven Kalpane malppere sadiyoundo.. Aven Padeyarala Sadhya undu.

ಜುಲೈ 25ರಿಂದ 31: ಮಂಗಳಾದೇವಿಯಲ್ಲಿ ಏಳದೆ ಮಂದಾರ ರಾಮಾಯಣ ತುಳು ಪ್ರವಚನ ಸಪ್ತಾಹ


 ಆಟಿ ತಿಂಗಳು ತುಳುನಾಡಿನ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಕೃತಿಯಲ್ಲಿ ಪ್ರಧಾನ ಪಾತ್ರ ವಹಿಸಿದೆ. ಆಟಿ  ಅನಿಷ್ಠಗಳ ಕಾಲ, ರೋಗರುಜಿನಗಳ ಕಾಲ, ಪ್ರಾಕೃತಿಕ ವಿಕೋಪಗಳು ಉಂಟಾಗುವ ಕಾಲ. ಈ ಸಮಯದಲ್ಲಿ  ಜನರ ಕಷ್ಟಕಾರ್ಪಣ್ಯಗಳನ್ನು ಕಳೆಯಲು ಮತ್ತು ಧೈರ್ಯ ಯಶಸ್ಸು ಲಭಿಸಲು ಪ್ರತಿ ಮನೆಗಳಲ್ಲಿ  ರಾಮನಾಮ ಜಪ- ರಾಮಾಯಣ  ಪಾರಾಯಣ; ಪುರಾಣಪ್ರವಚನ ಇತ್ಯಾದಿಗಳು ನಡೆಯುತ್ತಿತ್ತು. ಈಗಲೂ ಹಲವು ಕಡೆ ಈ ಸಂಪ್ರದಾಯ ನಡೆದು ಬರುತ್ತಿದೆ.ಆದರೆ ಬೇರೆ ಭಾಷಾ ವ್ಯಾಖ್ಯಾನ-ವಾಚನಗಳು ತುಳುನಾಡಿಗರಿಗೆ ತಕ್ಷಣ ಅರಗಿಸಿಕೊಳ್ಳಲು ಕಷ್ಟ. ಈ ನಿಟ್ಟಿನಲ್ಲಿ ತುಳುವ ವಾಲ್ಮೀಕಿ ಎಂದೇ ಪ್ರಸಿಧ್ಧರಾದ ಮಂದಾರ ಕೇಶವ ಭಟ್ಟರು ಬರೆದ ಪ್ರಸಿದ್ದ ತುಳು ಮಹಾಕಾವ್ಯ ಮಂದಾರ ರಾಮಾಯಣ ತುಳುನಾಡಿಗೆ ದೊಡ್ಡ ಕೊಡುಗೆ

ಕಾವ್ಯಕ್ಕೆ ಮನ್ನಣೆ:
ಮಂದಾರ ಕೇಶವ ಭಟ್ಟರ ಜನ್ಮ ಶತಮಾನೋತ್ಸವ(ಜನನ 2018)ದ  ಸಂದರ್ಭದಲ್ಲಿ ಅವರ ಮಹಾ ಕಾವ್ಯಕ್ಕೆ ಮನ್ನಣೆ ನೀಡಬೇಕೆಂಬ ಉದ್ದೇಶದಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ'  ತುಳುವರ್ಲ್ಡ್(ರಿ.) ಕುಡ್ಲ ಮತ್ತು  ಮಹಾತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಇವುಗಳ ಜಂಟಿ ಆಶ್ರಯದಲ್ಲಿ  'ಏಳದೆ ಮಂದಾರ ರಾಮಾಯಣ' (ಮಂದಾರ ರಾಮಾಯಣ ಪ್ರವಚನ ಸಪ್ತಾಹ )ತುಳು ವ್ಯಾಖ್ಯಾನ-ವಾಚನ ಆಯೋಜಿಸಲಾಗಿದೆ.
ರಾಜೇಶ್ ಆಳ್ವ
ಅಧ್ಯಕ್ಷತುಳುವರ್ಲ್ಡ್

ಜುಲೈ 25ರಿಂದ 31ರ ವರೆಗೆ  ಮಹಾತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಕಲಾ ಮಂಟಪದಲ್ಲಿ ಜರಗುವ 'ಏಳದೆ ಮಂದಾರ ರಾಮಾಯಣ' ದಲ್ಲಿ ನಾಡಿನ ಹೆಸರಾಂತ ವಿದ್ವಾಂಸರು ಮತ್ತು ಗಮಕಿಗಳಿಂದ ಪ್ರತಿ ದಿನ ಸಾಯಂಕಾಲ ತುಳು  ವ್ಯಾಖ್ಯಾನ-ವಾಚನ ನಡೆಯಲಿದೆ, ಜುಲೈ 25ರಂದು ಉದ್ಘಾಟನಾ ಸಮಾರಂಭ ಹಾಗೂ ಜುಲೈ 31ರಂದು ಸಮಾರೋಪ  ಸಮಾರಂಭ ಜರಗುವುದು. ಒಟ್ಟು 7 ದಿನಗಳ ಕಾರ್ಯಕ್ರಮದಲ್ಲಿ ನಾಡಿನ ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕರಾದ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಮಂದಾರ ರಾಮಾಯಣದ ಪ್ರಸಾರಕ್ಕೆ ಶ್ರಮಿಸುತ್ತಿರುವವರಿಗೆ 'ಮಂದಾರ ಸಮ್ಮಾನ'' ನೀಡಿ ಗೌರವಿಸಲಾಗುವುದು.

ಏಳದೆ ರಾಮಾಯಣ
 ಪ್ರಸ್ತುತ ಬೆಂಗಳೂರು ದೂರದರ್ಶನ 'ಚಂದನ' ವಾಹಿನಿಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ  ಗಂ.11.30 ಕ್ಕೆ  'ಮಂದಾರ ರಾಮಾಯಣ ಕಾವ್ಯ ರೂಪಕ' ಪ್ರಸಾರ ವಾಗುತ್ತಿದೆ.
       ಜುಲೈ 25 ಕ್ಕೆ ಆರಂಭವಾಗುವ ಪ್ರವಚನ ಸಪ್ತಾಹದಲ್ಲಿ ಈ ತುಳು ಮಹಾಕಾವ್ಯದ ಮೊದಲ 7 ಅಧ್ಯಾಯಗಳನ್ನು ಮಾತ್ರ ಪ್ರಸ್ತುತ ಪಡಿಸಲಾಗುತ್ತಿದೆ. ಅವುಗಳೆಂದರೆ - ಪುಂಚದ ಬಾಲೆ, ಬಂಗಾರ್ದ ತೊಟ್ಟಿಲ್, ಅಜ್ಜೇರೆ ಸಾಲೆ, ಮದಿಮೆದ ದೊಂಪ, ಪಟ್ಟೊಗು ಪೆಟ್ಟ್, ತೆಲಿಪುನಡೆ ಬುಲಿಪು ಮತ್ತು ಮೋಕೆದ ಕಡಲ್.
      ಉಳಿದ ಭಾಗಗಳನ್ನು  ಇಂತಹದ್ದೇ ಇನ್ನೊಂದು ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗುವುದು.
 ಭಾಸ್ಕರ ರೈ ಕುಕ್ಕುವಳ್ಳಿ
  ವ್ಯಾಖ್ಯಾನಕಾರರು

      ಈ ಬಗ್ಗೆ ಶ್ರೀ  ಮಂಗಳಾದೇವಿ ದೇವಸ್ಥಾನದಲ್ಲಿ  ನಡೆದ ಸಂಘಟನಾ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯ ಸಂಚಾಲಕರಾದ ಎ. ಶಿವಾನಂದ ಕರ್ಕೇರ ವಹಿಸಿದ್ದರು.  ಮಂದಾರ ರಾಮಾಯಣ ವ್ಯಾಖ್ಯಾನಕಾರರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ರೂಪುರೇಷೆ ನೀಡಿದರು. ಸಭೆಯಲ್ಲಿ ತೋನ್ಸೆ ಪುಷ್ಕಳ ಕುಮಾರ್, ಎಂ.ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಶಮೀನಾ ಆಳ್ವ, ವೀಣಾ ಜೆ. ಶೆಟ್ಟಿ, ಆಶಾ ಹೆಗ್ಡೆ, ಹರ್ಷ ರೈ ಪುತ್ರಕಳ, ಜಿ.ವಿ.ಎಸ್ ಉಳ್ಳಾಲ್, ಭೂಷಣ್ ಕುಲಾಲ್, ಅನಂತ ಕುಮಾರ್ ಬರ್ಲ, ಪ್ರೇಮ್ ಮೊದಲಾದವರು ವಿವಿಧ ಸಲಹೆಗಳನ್ನು ನೀಡಿದರು. ತುಳುವರ್ಲ್ಡ್ ಅಧ್ಯಕ್ಷ ರಾಜೇಶ್ ಆಳ್ವ ಬದಿಯಡ್ಕ ಸ್ವಾಗತಿಸಿ, ನಮ್ಮ ತುಳುನಾಡ್ ಟ್ರಸ್ಟ್‌ನ ದಿನೇಶ್ ರೈ ಕಡಬ ವಂದಿಸಿದರು.
Share on :

SUDDI

 

Copyright © 2011 Tulu World - All Rights Reserved