Google

ICHARO

YEDDE PATHERA
Naramaniyagh ovven Kalpane malppere sadiyoundo.. Aven Padeyarala Sadhya undu.

ಬ್ಯಾಂಕಾಕ್‌ನಲ್ಲಿ ಮೇಳೈಸಿದ ತುಳುವರೆ ಮಿನದನ ವಿಶ್ವತುಳು ಸಮ್ಮೇಳನಕ್ಕೆ ಬುನಾದಿ : ನವೀನ್ ರೋಶ್ ಪಿಂಟೋ


ಭಾಷೆ ಮತ್ತು ಸಂಸ್ಕೃತಿಯ ಹೆಸರಲ್ಲಿ ಜಗತ್ತಿನಲ್ಲಿ ಎಲ್ಲೇ  ಇದ್ದರೂ ಸಂಘಟಿತರಾಗುವಲ್ಲಿ ಮೊದಲಿಗರು ತುಳುವರು. ನಂಬಿಕೆ, ಧರ್ಮ, ಆಹಾರ ಪದ್ದತಿ, ಧಿರಿಸು, ಸಾಮಾಜಿಕ, ಅರ್ಥಿಕ ಸ್ಥಾನಮಾನಗಳ ನಡುವೆ ಅಂತರವಿದ್ದರೂ ತುಳು ಎಂದು ಹೇಳುವಾಗ ಒಗ್ಗಟ್ಟಾಗುತ್ತಾರೆ. ಬ್ಯಾಂಕಾಕ್ ತುಳುಕೂಟ ನೇತೃತ್ವದಲ್ಲಿ ನಡೆದ ತುಳುವೆರೆ ಮಿನದನವು ತುಳುನಾಡಿನ ಸಂಸ್ಕೃತಿ, ಸಾಮರಸ್ಯದ ಪ್ರತೀಕವಾಗಿದೆ ಮತ್ತು ಈ ಸಮಾರಂಭವು ಮುಂದೆ ಬ್ಯಾಂಕಾಕ್‌ನಲ್ಲಿ ವಿಶ್ವತುಳು ಸಮ್ಮೇಳನನ ಪ್ರೇರಣೆ ಹಾಗೂ ತಿ್ ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ತುಳುವರ್ಲ್ಡ್ ಮಂಗಳೂರು ನಡೆಸಿದ ತುಳು ಕನ್ನಡ ಸ್ನೇಹ ಸಮ್ಮೇಳನ ನಮ್ಮಲ್ಲಿ ಇಲ್ಲಿ ಕಾರ್ಯಕ್ರಮ ನಡೆಸುವ ಧೈರ್ಯ ತುಂಬಿತ್ತು ಎಂದು ಬ್ಯಾಂಕಾಕ್ ತುಳುಕೂಟದ ಅಧ್ಯಕ್ಷ  ನವೀನ್ ರೊಶ್ ಪಿಂಟೋ ಹೇಳಿದರು. ಅವರು ಬ್ಯಾಂಕಾಕ್ ತುಳುಕೂಟ ನೇತೃತ್ವದಲ್ಲಿ ನಡೆದ ತುಳುವರೆ ಮಿನದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮ್ಯಾಜಿಷ್ಯನ್ ಕುದ್ರೋಳಿ ಗಣೇಶ್, ಸಕಲಕಲಾ ವಲ್ಲಭ ಉಮೇಶ್ ಮಿಜಾರ್, ಕುಸಲ್ದ ಬಿರ್ಸೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು  ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು ಮತ್ತು ವಿವಿಧ ಕಾರ್ಯಕ್ರಮಗಳನ್ನು ನೀಡಿ ರಂಜಿಸಿದರು. ಶ್ರೀಮತಿ  ಅಕ್ಷಾತ ಪ್ರವೀಣ್ ಮತ್ತು ಪ್ರಮೀತಾ ಆನಂದ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬ್ಯಾಂ
ತುಳುಕೂಟದ ಪದಾಧಿಕಾರಿಗಳಾದ ವಿನಯ್ ರೈ, ವಿನ್ಸೆಂಟ್ ಡೇನಿಯಲ್ ಪಿಂಟೋ, ಸತೀಶ ಶೆಟ್ಟಿ, ಹಭೀಬುಲ್ಲಾ ಸಾಹೇಬ್ ಕಟಪ್ಪಾಡಿ , ಸತೀಶ್ ಶೆಟ್ಟಿ ಮತ್ತು ನಯಿಂ ಮುಹಮ್ಮದ್  ಯವರು ಜಂಟಿಯಾಗಿ ದೀಪ ಬೆಳಗಿಸಿದರು.


ಮ್ಯಾಜಿಷ್ಯನ್ ಕುದ್ರೋಳಿ ಗಣೇಶ್ ರವರಿಗೆ ಮೈಕಲ್ ವೇಗಸ್, ರವೀಂದ್ರ ಅಮೀನ್ ಮತ್ತು ಶಿವ ಪೂಜಾರಿ ಅವರು ಉಮೇಶ್ ಮಿಜಾರ್ ರವರಿಗೆ ನಿತಿನ್ ಪ್ರಭು, ಶಿವ ಪ್ರಸಾದ್, ಗುರು ಪ್ರಸಾದ್  ರವರು ಗೌರವಿಸಿದರು. ಲಾರ್ಸನ್ ಟೌರೋ , ಶರೀಕ್ ಹುಸೇನ್,ಮತ್ತು ಜೀವನ್ ಲೋಬೊ ಇವರು ಸಂದೀಪ್ ಶೆಟ್ಟಿ ಮಾಣಿ ಬೆಟ್ಟು ಇವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಇತ್ತಿÃಚೆಗೆ ನಿಧನರಾದ ರೊಬರ್ಟ್ ಕಿರಣ್ ಬರೇಟ್ಟೊ ಅವರಿಗೆ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು.


 ಕೂಟದ ಸದಸ್ಯರಿಗೆ ಕಾರ್ಯಕ್ರಮದಲ್ಲಿ ತುಳುನಾಡಿನ ಪ್ರಸಿದ್ದ ಕುಣಿತವಾದ ಪಿಲಿ ನಲಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ನಿರ್ಣಾಯಕರಾಗಿ ಶ್ರೀಮತಿ ಡೆಲೋರ ಲೋರೆನ್ ಪಿಂಟೊ, ಶ್ರೀಮತಿ ಸುಪ್ರಭಾ ಶೆಟ್ಟಿ , ಶ್ರೀಮತಿ ಮಾರ್ಗರೆಟ್ ಟಾರೊ ಭಾಗವಹಿಸಿದರು.. ಶ್ರೀಮತಿ ಡೆಲೊರಾ ಲೋರೈರ್ ಪಿಂಟೊ ಮತ್ತು ವಿನೋಲ್ ಡಿ. ಸೋಜ ಅವರು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದರು. ಶ್ರೀಮತಿ ಜಾನ್ ವಿಲ್ಸನ್ ಪಿಂಟೊ ಛಾಯಾಗ್ರಾಹಕರಾಗಿ ಸಹಕರಿಸಿದರು.  ತುಳು ಹಾಡು, ನೃತ್ಯಗಳೊಂದಿಗೆ ಕಾರ್ಯಕ್ರಮ ವರ್ಣರಂಜಿತವಾಗಿ ಮುಕ್ತಾಯಗೊಳ್ಳುವಾಗ ಯಶೋಧರ ಪೂಜಾರಿಯವರು ತಯಾರಿಸಿದ ತುಳುನಾಡಿನ ಆಹಾರ ಉಪಚಾರಗಳೊಂದಿಗೆ  ಅವಿಸ್ಮರಣೀಯವಾಯಿತು. ಪ್ರವೀಣ್ ಕುಮಾರ್  ಧೊಳ್ಟ್ಯಾತ್ತ   ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು
Share on :

SUDDI

 

Copyright © 2011 Tulu World - All Rights Reserved