Google

ICHARO

YEDDE PATHERA
Naramaniyagh ovven Kalpane malppere sadiyoundo.. Aven Padeyarala Sadhya undu.

ಶಕ್ತಿನಗರದಲ್ಲಿ ಜುಲೈ 25ರಿಂದ 31 ರವರೆಗೆ ' ಏಳದೆ ಮಂದಾರ ರಾಮಾಯಣ - ತುಳು ಪ್ರವಚನ ಸಪ್ತಾಹ







ಮಂಗಳೂರು: ತುಳುನಾಡಿನ ಧಾರ್ಮಿಕ ಸಾಂಸ್ಕೃತಿಕತೆಗಳಲ್ಲಿ ಆಟಿ ತಿಂಗಳ ಕಷ್ಟ ಕೋಟಳೆಗಳ ನಿವಾರಣೆಗಾಗಿ ಪ್ರತಿಮನೆಯಲ್ಲೂ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಇಂದು ಕೂಡ ಹಲವು ಕಡೆ ಈ ಸಂಸ್ಕೃತಿಯು ನಡೆದುಕೊಂಡು ಬರುತ್ತಿದೆ. ಆದರೆ ತುಳು ಭಾಷೆಯ ಪಾರಾಯಣ ಯಾವುದೇ ಕಡೆ ನಡೆಯುತ್ತಿಲ್ಲ. ತುಳುವ ವಾಲ್ಮೀಕಿ ಎಂದೇ ಹೆಸರು ಪಡೆದ ಮಂದಾರ ಕೇಶವ ಭಟ್ ಅವರು ಬರೆದ ಮಂದಾರ ರಾಮಾಯಣ ನಮ್ಮ ನೆಲದ ಮಹಾಕಾವ್ಯಗಳಲ್ಲಿ ಒಂದು. ಇದನ್ನು ನಾಡಿನಾದ್ಯಂತ  ಪ್ರಸರಿಸಬೇಕು ಎಂಬ ಧ್ಯೇಯದಿಂದ ಅವರ ನೂರ ಒಂದನೇ ಜನ್ಮದಿನಾಚರಣೆ ಸಂದರ್ಭ ವಿಶೇಷ ಗೌರವ ನೀಡಬೇಕೆಂಬ ಉದ್ದೇಶದಿಂದ ಜುಲೈ 25ರಿಂದ 31ರವರೆಗೆ ಪ್ರತಿದಿನ ಸಂಜೆ 5ರಿಂದ 8ರವರೆಗೆ ತುಳುವೆರೆ ಚಾವಡಿ ಶಕ್ತಿನಗರದಲ್ಲಿ 'ಏಳದೆ ಮಂದಾರ ರಾಮಾಯಣ - ಸುಗಿಪು ದುನಿಪು' ಎಂಬ ತುಳು ಪ್ರವಚನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ತುಳುವರ್ಲ್ಡ್ ಮಂಗಳೂರು ಮತ್ತು ತುಳುವೆರೆ ಕೂಟ ಶಕ್ತಿನಗರ ಸಂಯುಕ್ತವಾಗಿ ಆಯೋಜಿಸುತ್ತಿದೆ.
*ನಾಂದಿ ಕಾರ್ಯಕ್ರಮ*:
ಜುಲೈ 25 ಗುರುವಾರದಂದು 'ಮಂದಾರ ರಾಮಾಯಣ' ನಾಂದಿ ಕಾರ್ಯಕ್ರಮ ನಡೆಯಲಿದ್ದು ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಸಿ ಭಂಡಾರಿ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುವರೆ ಆಯನ ಕೂಟದ ಗೌರವಾಧ್ಯಕ್ಷರಾದ ಡಾ.ಆರೂರು ಪ್ರಸಾದ್ ರಾವ್  ವಹಿಸುವರು. ನಮ್ಮ ತುಳುನಾಡು ಟ್ರಸ್ಟಿನ ಗೌರವಾಧ್ಯಕ್ಷರಾದ ಹರಿಕೃಷ್ಣ ಪುನರೂರು ನಾಂದಿ ದೀಪ ಬೆಳಗುವರು.ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಆಶಯ ಭಾಷಣ ಮಾಡುವರು. ತುಳು ವಾಲ್ಮೀಕಿ ಮಂದಾರ ನೆನಪನ್ನು ನಿವೃತ್ತ ಪ್ರಾಚಾರ್ಯ ಮತ್ತು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ನಡೆಸಿಕೊಡುವರು. ಅತಿಥಿಗಳಾಗಿ ಡಾ ಜಯ ಚಂದ್ರವರ್ಮ ರಾಜ ಮಾಯಿಪ್ಪಾಡಿ,ಎ. ಶಿವಾನಂದ ಕರ್ಕೇರ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,ಸಂಘಟಕ ನವನೀತ್ ಶೆಟ್ಟಿ ಕದ್ರಿ, ನಿಟ್ಟೆ ಶಶಿಧರ್ ಶೆಟ್ಟಿ, ಮಂದಾರ ಶಾರದಾಮಣಿ, ಶಮೀನಾ ಆಳ್ವ ಮೂಲ್ಕಿ,ಡಾ. ರಾಜೇಶ್ ಆಳ್ವ, ಶ್ರೀಮತಿ ಭಾರತಿ ಜಿ ಅಮೀನ್, ಶ್ರೀಮತಿ ಶಾಂತ ಕುಂಟಿನಿ, ಚಂದ್ರಶೇಖರ ಕರ್ಕೇರ ಮೊದಲಾದವರು ಭಾಗವಹಿಸುವರು.

*ಸಪ್ತಾಹ ವಿಶೇಷ:*
ಏಳದೆ ಮಂದಾರ ರಾಮಾಯಣದ ಮೊದಲ ದಿನ 'ಪುಂಚದ ಬಾಲೆ' ಕಾವ್ಯ ಭಾಗದ ವಾಚನವನ್ನು ತೋನ್ಸೆ ಪುಷ್ಕಳ ಕುಮಾರ್ ಮತ್ತು ಮಂಜುಳ ಜಿ. ರಾವ್ ಇರಾ ಮಾಡಲಿದ್ದು, ಪ್ರವಚನವನ್ನು ಭಾಸ್ಕರ ರೈ ಕುಕ್ಕುವಳ್ಳಿ  ನಡೆಸಿಕೊಡುವರು

ಜುಲೈ 26ರಂದು ಶುಕ್ರವಾರದಂದು ತಿಮ್ಮಪ್ಪ ಶೆಟ್ಟಿ ನಿವೃತ್ತ ಭವಿಷ್ಯನಿಧಿ ಅಧಿಕಾರಿ ಹಾಗೂ ಶ್ರೀನಿವಾಸ ಪೂಜಾರಿ ಕುಂಟಲ್ಪಾಡಿ, ಎಸ್. ಸುದಾಕರ ಜೋಗಿ  ದೀಪ ಬೆಳಗಿಸುವರು. ಎರಡನೇ ದಿನದ 'ಬಂಗಾರ್ದ ತೊಟ್ಟಿಲ್' ಕಥನದ ವಾಚನವನ್ನು ಪ್ರಶಾಂತ ರೈ ಪುತ್ತೂರು ಮತ್ತು ಭವ್ಯಶ್ರೀ ಕುಲ್ಕುಂದ ಹಾಗೂ ಪ್ರವಚನವನ್ನು ನವನೀತ್ ಶೆಟ್ಟಿ ಕದ್ರಿ ನೆರವೇರಿಸುವರು.

ಜುಲೈ 27ರಂದು ಶನಿವಾರ ತಾರನಾಥ ಶೆಟ್ಟಿ ಬೋಳಾರ ಅಧ್ಯಕ್ಷರು ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನ, ರಾಜೇಶ್ ಗಟ್ಟಿ ಸೀನಿಯರ್ ಸೇಲ್ಸ್ ಮೆನೇಜರ್ ಅರವಿಂದ ಮೋಟರ್ಸ್ ಹಾಗೂ ಎನ್. ವಿಶ್ವನಾಥ್ ಮೊದಲಾದವರು ದೀಪ ಬೆಳಗಿಸಲಿದ್ದಾರೆ. ಮೂರನೇ ದಿನದ  'ಅಜ್ಜೇರೆ ಶಾಲೆ' ಅಧ್ಯಾಯದ ವಾಚನವನ್ನು ಯಜ್ಞೇಶ್ ರಾವ್ ಮತ್ತು ದಿವ್ಯ ಕಾರಂತ್ ಹಾಗೂ ಪ್ರವಚನವನ್ನು ಸರ್ಪಂಗಳ ಈಶ್ವರ ಭಟ್ ನೆರವೇರಿಸಲಿದ್ದಾರೆ.

ಜುಲೈ 28ರಂದು ಆದಿತ್ಯವಾರ ಆರ್ಯಭಟ ಪ್ರಶಸ್ತಿ ವಿಜೇತ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮತ್ತು ಧಾರ್ಮಿಕ ಚಿಂತಕರಾದ ಬಸ್ತಿ ದೇವದಾಸ್ ಶೆಣೈ, ಯಕ್ಷಗಾನ ಕಲಾವಿದ ದಿನೇಶ್ ರೈ ಕಡಬ ಮೊದಲಾದವರು  ದೀಪ ಬೆಳಗಿಸಲಿದ್ದಾರೆ. ನಾಲ್ಕನೇ ದಿನದ ಕಥನ' ಮದಿಮೆದ ದೊಂಪ' ದ ವಾಚನವನ್ನು ಹರೀಶ್ ಶೆಟ್ಟಿ ಸೂಡ ಮತ್ತು ವಿಜಯಲಕ್ಷ್ಮಿ ಕಟೀಲು ಹಾಗೂ ಪ್ರವಚನವನ್ನು ಭಾಸ್ಕರ ರೈ ಕುಕ್ಕುವಳ್ಳಿ ನೆರವೇರಿಸಲಿದ್ದಾರೆ.

ಜುಲೈ 29 ಸೋಮವಾರ ಗಣೇಶ್ ಕೆ ಮಹಾಕಾಳಿ ಪಡ್ಪು  ಸಮಾಜಸೇವಕರು, ತುಳುವೆರೆ ಆಯನ ಕೂಟದ ಕಾರ್ಯದರ್ಶಿ ಯಾದವ್ ಕೋಟ್ಯಾನ್, ವಿದ್ಯಾಶ್ರೀ ಎಸ್ ಉಲ್ಲಾಳ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಶಿಕ್ಷಕಿ ಇವರು ದೀಪ ಬೆಳಗಿಸಲಿದ್ದಾರೆ. 5ನೇ ದಿನದ ಕಥನ 'ಪಟ್ಟೊಗು ಪೆಟ್ಟ್ ' ಇದರ ವಾಚನವನ್ನು ಶಿವಪ್ರಸಾದ್ ಎಡಪದವು ಮತ್ತು ಶಾಲಿನಿ ಹೆಬ್ಬಾರ್ ಹಾಗೂ ಪ್ರವಚನವನ್ನು ಡಾ ದಿನಕರ್ ಎಸ್ ಪಚ್ಚನಾಡಿ ನಡೆಸಿ ಕೊಡುವರು .

ಜುಲೈ 30 ಮಂಗಳವಾರ ಎ.ಕೆ. ಜಯರಾಮ ಶೇಖ ಮಾಲಕರು ಮಹೇಶ್ ಮೋಟರ್ಸ್ ಮಂಗಳೂರು, ವಿ. ಶಂಕರ್ ನಾಯರ್ ಮುತ್ತಪ್ಪ ಸೇವಾ ಸಮಿತಿ ಹಾಗೂ ಹರ್ಷ ರೈ ಪುತ್ರಕಲ ಮೊದಲಾದವರು ದೀಪ ಬೆಳಗಿಸಲಿದ್ದಾರೆ. ಆರನೇ ದಿನದ ಕಥನ 'ತೆಲಿಪುನಡೆ ಬುಲಿಪು ' ಇದರ ವಾಚನವನ್ನು ಮಹಾಬಲ ಶೆಟ್ಟಿ ಕೂಡ್ಲು ಮತ್ತು ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಹಾಗೂ ವಾಚನವನ್ನು ದಯಾನಂದ ಕತ್ತಲ್ಸಾರ್  ನಡೆಸಿಕೊಡಲಿದ್ದಾರೆ.
*ಸಪ್ತಾಹ ಸಮಾಪನ*:
ಜುಲೈ 31ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ. ಸುಬ್ಬಯ್ಯ ರೈ ಮಾಜಿ ಅಧ್ಯಕ್ಷರು ಕೇರಳ ತುಳು ಅಕಾಡೆಮಿ ಇವರು ವಹಿಸಲಿದ್ದಾರೆ. ಡಾ. ಶ್ರೀ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಶ್ರೀಕ್ಷೇತ್ರ ಬಾಳೆಕೋಡಿ ದೀಪೋಜ್ವಲನ ಮಾಡುವರು. ಸಮಾರೋಪ ಭಾಷಣವನ್ನು ಹಿರಿಯ ಲೇಖಕಿ ಚಂದ್ರಕಲಾ ನಂದಾವರ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಂದಾರ ಲಕ್ಷ್ಮೀನಾರಾಯಣ ಭಟ್, ರಂಗಕರ್ಮಿ ಮತ್ತು ಪತ್ರಕರ್ತರಾದ ಪರಮಾನಂದ ಸಾಲ್ಯಾನ್, ಶ್ರೀಮತಿ ಸೇಸಮ್ಮ, ಉರ್ದು ಹಿರಿಯ ಪ್ರಾಥಮಿಕ ಶಾಲೆ,  ಕಲ್ಲಾಪು, ಟೈಂಸ್ ಅಫ್ ಕುಡ್ಲ ಸಂಪಾದಕರು ವಾಮನ ಇಡ್ಯಾ, ಪೂವರಿ ತುಳು ಪತ್ರಿಕೆ ಸಂಪಾದಕರು ವಿಜಯಕುಮಾರ್ ಬಂಡಾರಿ ಹೆಬ್ಬಾರ ಬೈಲು, ಮಂಗಳೂರು ವಿಶ್ವವಿದ್ಯಾಲಯದ ತುಳುಪೀಠ ಸದಸ್ಯ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ಲ್ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಮಂದಾರ ಕೇಶವ ಭಟ್ ಅವರ ಮಕ್ಕಳಿಗೆ ಮತ್ತು ಮಂದಾರ ರಾಮಾಯಣಕ್ಕೆ ಸೇವೆ ಸಲ್ಲಿಸಿದ ಹಿರಿಯರಿಗೆ ಗೌರವಾರ್ಪಣೆ ನಡೆಯಲಿದೆ.
ಕೊನೆಯ ಏಳನೇ ದಿನದ ಆಖ್ಯಾನ 'ಮೋಕೆದ ಕಡಲ್ ' ಇದರ ವಾಚನವನ್ನು ತೋನ್ಸೆ ಪುಷ್ಕಳ ಕುಮಾರ್ ಮತ್ತು ಸಂಗೀತ ಬಾಲಚಂದ್ರ ಹಾಗೂ ಪ್ರವಚನವನ್ನು ಭಾಸ್ಕರ ರೈ ಕುಕ್ಕುವಳ್ಳಿ ಇವರು ನಡೆಸಿಕೊಡಲಿದ್ದಾರೆ.
      ಕಾರ್ಯಕ್ರಮಕ್ಕೆ ಸ್ಥಳೀಯ ಸಂಘಟನೆಗಳು ಮತ್ತು ತುಳು ಪರ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಲಿವೆ ಎಂದು ತುಳುವರ್ಲ್ಡ್ ಹಾಗೂ ತುಳುವೆರೆ ಕೂಟ ಪ್ರಕಟಣೆಯಲ್ಲಿ ತಿಳಿಸಿವೆ.
Share on :

SUDDI

 

Copyright © 2011 Tulu World - All Rights Reserved