Google

ICHARO

YEDDE PATHERA
Naramaniyagh ovven Kalpane malppere sadiyoundo.. Aven Padeyarala Sadhya undu.

ಭಾರತದ ಸಂವಿಧಾನಕ್ಕೆ ತುಳುನಾಡಿನ ಆಡಳಿತ ಮಾದರಿ. : ವರ್ಧಮನ್ ದುರ್ಗಾಪ್ರಸಾದ್ ಶೆಟ್ಟಿ


ಭಾರತದ ಸಂವಿಧಾನ ರಚಿಸುವಾಗ ಅದೆಷ್ಟು ತುಳುನಾಡಿನ ಆಡಳಿತ ಮಾದರಿಯನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಆದುದರಿಂದಲೇ ಸಂವಿಧಾನ ರಚಿಸುವಾಗ ತುಳುನಾಡಿನ ಪ್ರಮುಖರು ಮುಂಚೂಣಿಯಲ್ಲಿದ್ದರು. ತುಳುನಾಡಿನ ಬೀಡು ಗುತ್ತು ಪರೀಕ್ಷೆಗಳ ತ್ಯಾಗಗಳು ಮಹತ್ತರವಾದದ್ದು. ತಮ್ಮ ಕೈಯಲ್ಲಿರುವ ಎಲ್ಲಾ ಆಸ್ತಿಗಳನ್ನು ಅಡವಿಟ್ಟಆದರು ಧರ್ಮ ದೈವಗಳಿಗೆ ಧರ್ಮಕ್ಕೆ ಚ್ಯುತಿ ಬರದಂತೆ ನೇಮ ಕೋಲ, ತಂಬಿಲಗಳನ್ನು ಕೊಟ್ಟು ಆಯಾ ಗ್ರಾಮಗಳನ್ನು ಸಂರಕ್ಷಿಸುತ್ತಾರೆ. ಗುತ್ತು ಎಂಬುದು ಬರೆ ಮನೆತನವರಿಗೆ ಸಂಬಂಧಪಟ್ಟದ್ದಲ್ಲ ಅದು ಆಯಾ ಊರು ಗ್ರಾಮಗಳಿಗೆ, ರಾಜ್ಯಗಳಿಗೆ ಸಂಬಂಧಪಟ್ಟದ್ದು. ಇಲ್ಲಿನ ಆಡಳಿತ ರೀತಿ ನಿಸ್ವಾರ್ಥ ರಹಿತವಾದದ್ದು. ಗುತ್ತುಗಳು ಕೇವಲ ಒಂದು ಜನಾಂಗಕ್ಕೆ ಮಾತ್ರ ಮೀಸಲಾಗಿದೆ ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಗುತ್ತುಗಳ ಆಡಳಿತ ಗಳನ್ನು ನಡೆಸಿಕೊಂಡು ಬಂದವರು.ಆದುದರಿಂದಲೇ ಭಾರತವು ಈಗ ಪ್ರಾಚೀನ ಭಾರತದ ಆಡಳಿತ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬರಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ತುಳುನಾಡಿನ ಎಲ್ಲಾ ಬಿಡು ಗೊತ್ತು, ಬಾರಿಕೆ, ಭಾವ, ಪರಡಿ, ಮತ್ತು ಮಾಗಂದಡಿಗಳ ಮತ್ತು ಇನ್ನಿತರ ಧರ್ಮ ಆಡಳಿತ ವ್ಯವಸ್ಥೆಗಳನ್ನು ಒಟ್ಟುಸೇರಿಸಿ ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಸಮಿತಿಯನ್ನು ರೂಪಿಕರಿಸಲಾಗಿದೆ. ಈ ರೀತಿಯಲ್ಲಿ ಪ್ರಾಚೀನ ಧರ್ಮ ಆಡಳಿತಕ್ಕೆ ಒಂದು ವೇದಿಕೆ ನಿರ್ಮಾಣವಾದಂತಿದೆ ಎಂದು ಗೊಳಿದಡಿ ಗುತ್ತಿನ ಗಡಿಕಾರರಾದ ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಅವರು ಹೇಳಿದರು. ಅವರು ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಭೆಯಲ್ಲಿ ಜಗದೀಶ್ ಅಧಿಕಾರಿ ಕೆಲ್ಲಪುತ್ತಿಗೆ, ಮಹೇಶ್ ಶೆಟ್ಟಿ ತಿಮರೋಡಿ ಬಿಡು, ರೋಹಿತ್ ಕುಮಾರ್ ಕಟೀಲು ಮಂಜಲೊಟ್ಟು ಬಿಡು, ಸತೀಶ್ ಕಾವ ಬೆಲ್ಲಿಬೆಟ್ಟು ಗುತ್ತು, ಮನೋಜ್ ಕುಮಾರ್ ಕುಂಜರ್ಪ ಮನೆ, ಪ್ರದೀಪ್ ಪೂಜಾರಿ ಪಟ್ರಬೆಟ್ಟು ಬಾರಿಕೆ, ಕಿರಣ ಆಳ್ವಾ ಕುತ್ಯಾರು ಕುತ್ಯಾರು ಮಾಗಂದಡಿ, ಸೀತಾರಾಮ ಕರ್ಕೇರ ಪಾವೂರು ಭಂಡಾರ ಮನೆ, ನವೀನ್ ಶೆಟ್ಟಿ ಪೆರ್ಮರ ಗುತ್ತು, ನವೀನ್ ಶೆಟ್ಟಿ ಎಡ್ಮೆಮಾರು, ಕಿರಣ ಹೆಗ್ಡೆ ಬೀರಣ್ಣ ಶೆಟ್ರ ಮನೆ ಮುಕ್ಕ, ಮೋಹನ್ ದಾಸ್ ಶೆಟ್ಟಿ ನೈಮುಗೇರು ಬಾರಿಕೆ, ಡಾ. ರಾಜೇಶ್ ಆಳ್ವ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು
ದಿವಾಕರ ಸಾಮಾನಿ ಚೆಳ್ಯಾರು ಗುತ್ತು ಸ್ವಾಗತಿಸಿ, ಪರಮಾನಂದ ಸಾಲ್ಯಾನ್ ಹೆಜಮಾಡಿ ದೊಡ್ಡಮನೆ ವಂದಿಸಿದರು.  ಮುಂದಿನ ಸಭೆಯನ್ನು ಆಗಸ್ಟ್ 6ರಂದು ಬೆಳ್ತಂಗಡಿ ತಾಲೂಕಿನ ಗಡಿಕಾರರಾದ ಕಂಚಿ ಪೂವಣಿ ಯಾನೆ ಜೀವಂಧರ್ ಕುಮಾರ್ ಜೈನ್ ಅವರ ಪದ್ಯೋಡಿ ಗುತ್ತುವಿನಲ್ಲಿ ನಡೆಸಲು ತೀರ್ಮಾನಿಸಲಾಯಿತು.
Share on :

SUDDI

 

Copyright © 2011 Tulu World - All Rights Reserved