Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಡಾ. ವಿನೋದ್ ಕುಮಾರ್ ಅವರಿಗೆ ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ.


ಪ್ರಸಕ್ತ ಗ್ಲೋಬಲ್ ಬಿಸಿನೆಸ್ ಗ್ರೂಪ್ ಸಂಸ್ಥೆಯ ಅಧ್ಯಕ್ಷರಾದ ಡಾ. ವಿನೋದ್ ಕುಮಾರ್ ಅವರಿಗೆ 2019 -20ರ ಸಾಲಿನ ವೈಯಕ್ತಿಕ  ಆರ್ಥಿಕ ಬೆಳವಣಿಗೆಗೆ ಇರುವ ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೆಹಲಿಯ ಎಕನಾಮಿಕ್ ಗ್ರೋತ್ ಸೊಸೈಟಿ ಆಫ್ ಇಂಡಿಯಾ ಕೊಡಲ್ಪಡುವ ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿಯನ್ನು ಇತ್ತೀಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಪ್ರಧಾನ ಮಾಡಲಾಯಿತು.
ಡಾ. ವಿನೋದ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುವ ಗ್ಲೋಬಲ್ ಬಿಸಿನೆಸ್ ಗ್ರೂಪ್ ಸಂಸ್ಥೆಯ ಆರ್ಥಿಕ ಬೆಳವಣಿಗೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಗೋವಾ ವಿಧಾನ ಸಭೆಯ ಗೌರವಾನ್ವಿತ ಸ್ಪೀಕರ್ ಅನಂತ ವಿ. ಶೇಟ್. ಗೌರವಾನ್ವಿತ ವಿಜಯ್ ಪೋಲ್ ಸರ್ಪಂಚ್, ವಿಪಿ ಮಾಯೆಮ್ಮ್ ಮಾಯೆಮಾರ್, ಎಂಎಸ್ಎಂಇ ಅಧ್ಯಕ್ಷ ಮಂಗುರೀಶ್ ಪೃ, ಯುಕೆಯ ಜಾಗತಿಕ ಪರಿಸರ  ನಿರ್ವಹಣಾ ಸಮಿತಿ ಅಧ್ಯಕ್ಷ ಗ್ಯಾರಿ ಡಿ ಲಾ ಫೂಮೆರಾಯಿ, ಮಾಜಿ ಸಿಬಿಐ ಡೈರೆಕ್ಟರ್ ವಿ.ಎನ್ ಸೇಗಲ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Share on :

SUDDI

 

Copyright © 2011 Tuluworld - All Rights Reserved