ಇಂಡಿಯನ್ ಜರ್ನಲಿಸಂ ಕ್ಯಾಂಪಂಡಿಯಾಂ ನ್ಯೂ ಡೆಲ್ಲಿ ಇವರು ಕೊಡ ಮಾಡಲ್ಪಡುವ *ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ* ಯನ್ನು ಕಾಸರಗೋಡಿನ *ರಾಜೇಶ್ ಶೆಟ್ಟಿ* ಅವರಿಗೆ ಇತ್ತೀಚೆಗೆ ಗೋವಾದಲ್ಲಿ ನಡೆದ ಸಮಾರಂಭದಲ್ಲಿ *ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್* ಪ್ರದಾನ ಮಾಡಿದರು.
ಕಾಸರಗೋಡಿನ ಕುಂಬ್ದಾಜೆ ಪಂಚಾಯತಿನ ಪುತ್ತೋಡಿ ಸದಾಶಿವ ಶೆಟ್ಟಿ ಮತ್ತು ಪ್ರಭಾವತಿ ಶೆಟ್ಟಿ ಇವರ ಸುಪುತ್ರ. ಗೋವಾದಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದು. ತುಳು ಭಾಷೆ ಸಂಸ್ಕೃತಿಗೆ ಮತ್ತು ಸಮಾಜ ಸೇವೆಯಲ್ಲಿ ಹಲವಾರು ಕಾರ್ಯ ಸಾಧನೆಗಳನ್ನು ಮಾಡಿದ್ದಾರೆ. ಇವರು ತುಳುವರ್ಲ್ಡ್ ಗೋವಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತುಳು ಕನ್ನಡ ಮಲಯಾಳ ಕೊಂಕಣಿ ಹಿಂದಿ ಮುಂತಾದ ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿದ್ದಾರೆ.