Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಪ್ರಕಾಶ್ ಶೆಟ್ಟಿ ಅವರ ಎಂಆರ್’ಜಿ ಗ್ರೂಪ್ ವತಿಯಿಂದ ಅಶಕ್ತರಿಗೆ 1.25 ಕೋಟಿ ರೂ. ಆರ್ಥಿಕ ನೆರವು

 ಮಂಗಳೂರು : ಜೀವನದಲ್ಲಿ  ನಾನು ಶ್ರಮಪಟ್ಟು ಉದ್ಯಮ ನಡೆಸಿ ಹಣ ಗಳಿಸಿದ್ದು, ಅದನ್ನು ಸಮಾಜಸೇವೆಗೆ ವಿನಿಯೋಗಿಸಲು ಬಯಸಿ ಇಂದು ಅಶಕ್ತರಿಗೆ ಸಣ್ಣ ಮೊತ್ತದ ಧನ ಸಹಾಯ ಮಾಡಿ ಅಳಿಲುಸೇವೆ ಮಾಡುತ್ತಿದ್ದೇನೆ.

ನಮ್ಮ ಸಾವಿರಾರು ನೌಕರರು ದುಡಿದಿದ್ದರ ಫಲವಾಗಿ ನನ್ನ ಸಂಸ್ಥೆ ಉದ್ಧಾರವಾಗಿದೆ. ಈ ಮೂಲಕ ಇಂದು ನನಗೆ ಸಹಾಯಧನ ಕೊಡಲು ಅನುಕೂಲವಾಗಿದೆ ಎಂದು ಎಂಜಿಆರ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕೆ.ಶೆಟ್ಟಿ ಹೇಳಿದರು.


ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಎಂಜಿಆರ್ ಗ್ರೂಪ್ ಸಂಸ್ಥೆಯ ವತಿಯಿಂದ ಅನಾರೋಗ್ಯ  ಪೀಡಿತರಿಗೆ ಅಶಕ್ತರಿಗೆ ವಿಧ್ಯಾಭ್ಯಾಸದ ನೆರವಿಗೆ 1,25,75,000 ಕೋಟಿ ರೂ ಮೊತ್ತದ ಸಹಾಯಧನ ವಿತರಣಾ ಕಾರ್ಯಕ್ರಮ ನಡೆಯಿತು   

ನಾನು 1959 ರಲ್ಲಿ ಹುಟ್ಟಿದ್ದು, ಆ ಬಳಿಕ 20 ವರ್ಷಗಳ ಕಾಲ ನಾನು ಬಹಳ ಕಷ್ಟ ಪಟ್ಟಿದ್ದೆ. ಅಂದು ನಾನು ನನ್ನಂತೆ ಇರುವ ಅಶಕ್ತರಿಗೆ ಸಹಾಯ ಮಾಡಬೇಕೆಂದು ಸಂಕಲ್ಪ ಮಾಡಿದ್ದೆ. 1983ರಲ್ಲಿ ಬೆಂಗಳೂರು ಸೇರಿ ಕಷ್ಟಪಟ್ಟು ದುಡಿದೆ. 1992 ರಲ್ಲಿ ನನ್ನ ಕಷ್ಟದ ದಿನಗಳ ಫಲಿತಾಂಶ ದೊರಕಲಾರಂಭಿಸಿತು. ಇಂದು ಸುಮಾರು 400 ಮಂದಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಣ್ಣ ಮೊತ್ತ ನೀಡಿದ್ದೇನೆ.

ನೀವು ಮುಂದಿನ ದಿನಗಳಲ್ಲಿ ನಾನು ಈ ವೇದಿಕೆಯಲ್ಲಿ ನಿಂತು ಮಾತನಾಡಿದಂತೆ ನಿಮಗೂ ಅವಕಾಶವಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಕಷ್ಟ ಎಲ್ಲರಿಗೂ ಬರುತ್ತದೆ. ಆದರೆ, ಅದನ್ನು ಎದುರಿಸಿ ಮುನ್ನುಗ್ಗುವ ಛಲ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ 540 ಹೆಚ್ಚು ಸಂತ್ರಸ್ತರಿಗೆ ಸಹಾಯಧನ ವಿತರಿಸಿದ್ದು, 50,000 ಮೊತ್ತದ ಚೆಕ್ ನ್ನು50 ಜನರಿಗೆ, 25,000 ಮೊತ್ತದ ಚೆಕ್160 ಜನರಿಗೆ, 60 ಜನರಿಗೆ 15,000 ರೂ ಮೊತ್ತದ ಚೆಕ್, 250 ಜನರಿಗೆ 10,000 ಮೊತ್ತದ ಚೆಕ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಂಡೋಸಲ್ಫಾನ್ ಪೀಡಿತರು, ಕ್ಯಾನ್ಸರ್, ಕಿಡ್ನಿ ವೈಪಲ್ಯ, ಬುದ್ದಿಮಾಂದ್ಯತೆ,ಪಕ್ಷಪಾತ ಹಾಸಿಗೆ ಹಿಡಿದಿರುವ ಅಶಕ್ತರಿಗೂ   ವೈದಕೀಯ ಸಹಾಯಕ್ಕೆ ಚೆಕ್ ವಿತರಿಸಿದರು. ಬಡವಿದ್ಯಾರ್ಥಿಗಳಿಗೆ ತಲಾ 25,000 ರೂ ಸಹಾಯಧನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಅಯ್ಕೆ ಸಮಿತಿ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಫಳಾನುಭವಿಗಳ ಪಟ್ಟಿಯನ್ನು ವಾಚಿಸಿದರು. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ವಿಶ್ವಬಂಟರ ಸಂಘದ ಅಧ್ಯಕ್ಷ ಎ.ಜೆ ಶೆಟ್ಟಿ, ಸದಾನಂದ ಶೆಟ್ಟಿ ಮನೋಹರ್ ಶೆಟ್ಟಿ ಸಾಹಿರಾಧ  ,ಜಯಕರ್ ಶೆಟ್ಟಿ ಇದ್ರಾಳಿ, ಪುರುಷೋತ್ತಮ್ ಶೆಟ್ಟಿ ಉಡುಪಿ, ಸುರೇಶ್ ಶೆಟ್ಟಿ ಗುರ್ಮೆ,ಮಂಗಳೂರು ಬಂಟರಸAಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ , ಸಂತೋಷ್ ಕುಮಾರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಸುರೇಶ್ ಶೆಟ್ಟಿ, ರವಿ ಶೆಟ್ಟಿ ಉಡುಪಿ ಹಲವು ಗಣ್ಯರು ಉಪಸ್ಥಿತರಿದ್ದರು. ನಿತಿನ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.    


Share on :

SUDDI

 

Copyright © 2011 Tuluworld - All Rights Reserved